ಗಾಯಾಳುಗಳ ಆರೋಗ್ಯ ವಿಚಾರಿಸಿದ ಡಿಸಿ

25chn2
Published on

ಚಾಮರಾಜನಗರ: ಬಂಡೀಪುರದ ಸಮೀಪದಲ್ಲಿ ಬಸ್ ಅಪಘಾತದಿಂದ ಗಾಯಗೊಂಡಿದ್ದ ಪ್ರಯಾಣಿಕರನ್ನು ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್ ಭೇಟಿಮಾಡಿ ಅಗತ್ಯ ವೈದ್ಯಕೀಯ ಸೇವೆಗಳನ್ನು ನೀಡಲು ಸೂಚನೆ ನೀಡಿದರು.

ತಮಿಳುನಾಡಿನ ಊಟಿಯಿಂದ ಮೈಸೂರಿನ ಕಡೆಗೆ ಪಶ್ಚಿಮ ಬಂಗಾಳದ ಸುಮಾರು 72 ಜನ ಪ್ರಯಾಣಿಕರು ಇದ್ದ ಬಸ್ ಮಂಗಳವಾರ ಬಂಡೀಪುರ ಸಮೀಪದಲ್ಲಿ ಆಯಾತಪ್ಪಿ ಬಸ್ ಪಲ್ಟಿ ಹೊಡೆದ ಪರಿಣಾಮವಾಗಿ 75 ಪ್ರಯಾಣಿಕರ ಪೈಕಿ 25 ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿತ್ತು. ಅವರನ್ನು ಚಾಮರಾಜನಗರದ ಸಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲುಮಾಡಲಾಗಿತ್ತು. ವಿಷಯ ತಿಳಿಯುತ್ತಿದ್ದಂತೆಯೇ ಜಿಲ್ಲಾಧಿಕಾರಿ ಶಿಲ್ಪಾನಾಗ ಸ್ಥಳಕ್ಕೆ ಆಗಮಿಸಿ, ವೈದ್ಯರೊಂದಿಗೆ ಸಮಾಲೋಚನೆ ನಡೆಸಿ ಅಗತ್ಯ ವೈದ್ಯಕೀಯ ಸೇವೆಗಳನ್ನು ನೀಡಲು ಸೂಚನೆ ನೀಡಿದರು.

ಗುಂಡ್ಲುಪೇಟೆಯ ಡಾ ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಉಳಿದ ಪ್ರಯಾಣಿಕರಿಗೆ ಉಳಿದುಕೊಳ್ಳಲು ವಸತಿ ಊಟ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ಅವರನ್ನು ಸುರಕ್ಷಿತವಾಗಿ ಊರಿಗೆ ಕಳುಹಿಸಲು ಪಶ್ಚಿಮ ಬಂಗಾಳದ ಅಲ್ಲಿನ ಜಿಲ್ಲಾಡಳಿತದೊಂದಿಗೆ ಸಂಪರ್ಕಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net