ಸಾಗುವಳಿ ಚೀಟಿ ಅರ್ಜಿದಾರರ ಜಮೀನಿಗೆ ಜಿಯೋ ೆನ್ಸಿಂಗ್

krishna Byire Gowda 01
Published on

ಚಾಮರಾಜನಗರ: ಸಾಗುವಳಿ ಚೀಟಿಗಾಗಿ ಅರ್ಜಿ ಹಾಕಿರುವವರ ಜಮೀನಿಗೆ ಜಿಯೋ ೆನ್ಸಿಂಗ್ ಮಾಡಲಾಗುವುದು. ನಿಜವಾಗಿಯೂ ಸಾಗುವಳಿ ಮಾಡುತ್ತಿದ್ದಾರೆಯೇ ಎಂದು ಸ್ಯಾಟಲೈಟ್‌ನಿಂದ ಪೋಟೋ ತೆಗೆದುಕೊಂಡು ಖಾತೆ ಮಾಡಿಕೊಡುವ ಪೈಲೆಟ್ ಯೋಜನೆ ಸಿದ್ಧ ಪಡಿಸಲಾಗುತ್ತಿದೆ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ತಿಳಿಸಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಕಂದಾಯ ಇಲಾಖೆ ವತಿಯಿಂದ ಶನಿವಾರ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಸರ್ಕಾರಿ ಭೂಮಿ ರಕ್ಷಣೆಗಾಗಿ ಆ್ಯಪ್ ರಚನೆ ಮಾಡಿ ಸರ್ಕಾರಿ ಜಾಗಗಳನ್ನು ಗ್ರಾಮವಾರು ದಾಖಲೆ ಸಿದ್ಧ ಪಡಿಸುತ್ತಿದ್ದೇವೆ. ಮೂರು ತಿಂಗಳಿಗೆ ಒಮ್ಮೆ ಗ್ರಾಮ ಲೆಕ್ಕಾಧಿಕಾರಿ ಪ್ರತಿ ಸರ್ಕಾರಿ ಜಮೀನಿಗೆ ಭೇಟಿ ನೀಡಿ, ಸ್ಥಳದಲ್ಲೇ ನಿಂತು ಭೂಮಿ ಮಾಹಿತಿಯನ್ನು ಆ್ಯಪ್‌ನಲ್ಲಿ ಅಪ್ಲೋಡ್ ಮಾಡಲಿದ್ದಾರೆ. ಒತ್ತುವರಿಯಾಗಿದ್ದರೆ ತೆರವು ಮಾಡಿಸಲಿದ್ದಾರೆ ಎಂದು ಹೇಳಿದರು.

5 ಗುಂಟೆ ಕೃಷಿ ಭೂಮಿ ಖರೀದಿ ಮಾಡಲು ಕಾನೂನಿನಲ್ಲಿ ಅವಕಾಶವಿದೆ. ಬಹುಶಃ ಅಕ್ರಮವಾಗಿ ಲೇಔಟ್ ಮಾಡುವವರು 1 ಗುಂಟೆ ಖರೀದಿ ಮತ್ತು ಮಾರಾಟ ಮಾಡಲು ಕೇಳುತ್ತಾರೆ. ಹಿಂದಿನ ಸರ್ಕಾರದವರು ಮಾಡಿದ್ದಾರೆ. ಅದನ್ನು ನಾನೂ ಕೂಡ ಸಮರ್ಥನೆ ಮಾಡುತ್ತೇನೆ. ಅವರ ವಿರುದ್ಧ ಆರೋಪ ಮಾಡುವುದಿಲ್ಲ. ಸಾರ್ವಜನಿಕರ ಹಿತದಿಂದ ಮಾಡಿದ್ದಾರೆ. ಕೃಷಿ ಭೂಮಿಯನ್ನು ಕನ್ವರ್ಷನ್ ಮಾಡಿ, ಪ್ಲ್ಯಾನ್ ಅಪ್ರೂವಲ್ ಮಾಡಿ ಸೈಟ್ ಮಾಡಿ ಮಾರಾಟ ಮಾಡಲು ಅವಕಾಶವಿದೆ. ಈ ಕುರಿತು ಜನರಿಗೆ ತಪ್ಪು ಸಂದೇಶ ನೀಡಬಾರದು ಎಂದರು.

ಅಣಬೆ ರೀತಿ ಅನಧಿಕೃತ ಬಡಾವಣೆಗಳ ಸಂಖ್ಯೆ ಹೆಚ್ಚಾಗುತ್ತಿದೆ. ಮೂಲಸೌಕರ್ಯಗಳನ್ನು ನೀಡದೆ, ಕೃಷಿ ಭೂಮಿಯನ್ನು ಲೇಔಟ್ ಮಾಡುತ್ತಿದ್ದುದ್ದನ್ನು ತಡೆಯಲು ಹಿಂದಿನ ಸರ್ಕಾರ ಕನಿಷ್ಠ 5 ಗುಂಟೆ ಖರೀದಿ ಮಾರಾಟವಾಗಬೇಕೆಂದು ತಿಳಿಸಿತ್ತು. 1 ಗುಂಟೆ ಜಮೀನು ಖರೀದಿ ಮಾಡಬೇಕೆಂದರೆ ಕಾನೂನಾತ್ಮಕವಾಗಿ ಮಾರಾಟ ಮಾಡಬೇಕು ಎಂದು ಹೇಳಿದರು. ಕಂದಾಯ ಇಲಾಖೆಯಲ್ಲಿ ಹಲವು ವರ್ಷಗಳಿಂದ ಬಾಕಿ ಇದ್ದ ಪ್ರಕರಣಗಳನ್ನು ವಿಲೇವಾರಿ ಮಾಡುತ್ತಿದ್ದೇವೆ. ಈ ಹಿಂದೆ ತಹಸೀಲ್ದಾರ್ ಕೋರ್ಟ್‌ನಲ್ಲಿ ಒಂದು ಪ್ರಕರಣ ದಾಖಲಾದರೆ ಅದನ್ನು ವಿಲೇವಾರಿ ಮಾಡಲು 212 ದಿನ ತೆಗೆದುಕೊಳ್ಳುತ್ತಿದ್ದರು. ಪ್ರಸ್ತುತ 137 ದಿನಗಳನ್ನು ಮಾತ್ರ ತೆಗದುಕೊಳ್ಳುತ್ತಿದ್ದೇವೆ ಎಂದು ವಿವರಿಸಿದರು.

ತಹಸೀಲ್ದಾರ್ ಕೋರ್ಟ್‌ನಲ್ಲಿ 90 ದಿನಗಳ ಒಳಗೆ ವಿಲೇವಾರಿಯಾಗಬೇಕಾದ ಪ್ರಕರಣಗಳು 5 ವರ್ಷಕ್ಕೂ ಮೇಲೆ 158 ಪ್ರಕರಣಗಳು ಇದ್ದವು. ಚಾಮರಾಜನಗರ ಜಿಲ್ಲೆಯಲ್ಲಿ ಇವು ಶೂನ್ಯವಾಗಿದೆ. ರಾಜ್ಯದಲ್ಲಿ ಕೇವಲ 30 ಪ್ರಕರಣಗಳು ಮಾತ್ರ ಬಾಕಿ ಇದ್ದು, ಮುಂದಿನ 15 ದಿನಗಳಲ್ಲಿ ಎಲ್ಲವೂ ಮುಕ್ತಾಯಗೊಳ್ಳಲಿವೆ. ಇದೇ ರೀತಿ 1ರಿಂದ 2 ವರ್ಷಕ್ಕೆ ಬಾಕಿ ಇದ್ದ 1645 ಕೇಸ್‌ಗಳನ್ನು 926ಕ್ಕೆ ಇಳಿಸಿದ್ದೇವೆ. ಮುಂದಿನ 1 ತಿಂಗಳ ಒಳಗೆ ಆದಷ್ಟು 6 ತಿಂಗಳಿಗಿಂತ ಹೆಚ್ಚು ಕೇಸ್‌ಗಳು ಬಾಕಿ ಇರಬಾರದೆಂದು ಗುರಿ ಇಟ್ಟುಕೊಂಡು ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.

ಎಲ್ಲ ತಾಲೂಕು ಕಚೇರಿಗಳಲ್ಲಿ ಇ-ಆಫೀಸ್ ಅನುಷ್ಠಾನಗೊಳಿಸಿದ್ದೇವೆ. ಕಡತ ನಿಧಾನ ಮಾಡುವುದು, ಕಳೆದು ಹಾಕುವ ವ್ಯವಸ್ಥೆಗೆ ಸಂಪೂರ್ಣ ವಿರಾಮ ಹಾಕಿ ಪಾರದರ್ಶಕ ಕಾರ್ಯ ಮಾಡುತ್ತಿದ್ದೇವೆ. ಸರ್ವೆ ಇಲಾಖೆಯಲ್ಲೂ ಸಹ ಬಹಳ ವರ್ಷಗಳಿಂದ ಬಾಕಿ ಇರುವ ಪ್ರಕರಣಗಳನ್ನು ಪರಿಹರಿಸಲು ಪ್ರಕ್ರಿಯೆಗೆ ಚಾಲನೆ ನೀಡಿದ್ದೇವೆ. ತಾಲೂಕು ಕಚೇರಿ ಬಳಿಕ ಹೋಬಳಿ ಕಚೇರಿಗಳಿಗೆ ಇ-ಆಫೀಸ್ ಅನುಷ್ಠಾನಗೊಳ್ಳುತ್ತಿದೆ. ದಲ್ಲಾಳಿಗಳ ಹಾವಳಿಯನ್ನು ತಡೆಯಲು ತಂತ್ರಜ್ಞಾನ ಬಳಕೆ ಮಾಡುತ್ತಿದ್ದೇವೆ. ಬದಲಾವಣೆಯ ದಿಕ್ಕಿನಲ್ಲಿ ಸಾಗುತ್ತಿದ್ದೇವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net