7ರಿಂದ 12ರವರೆಗೆ ಗಿರಿಜಾ ಕಲ್ಯಾಣ ಮಹೋತ್ಸವ

5raju10
Published on

ಚಾಮರಾಜಗರ: ನಗರದ ಶ್ರೀಚಾಮರಾಜೇಶ್ವರಸ್ವಾಮಿ ದೇವಸ್ಥಾನದ ಶ್ರೀಕೆಂಪನಂಜಾಂಬಾ ಅಮ್ಮನವರ ಸಮೇತ ಶ್ರೀಚಾಮರಾಜೇಶ್ವರಸ್ವಾಮಿ ಅವರಿಗೆ ಬೆಳೆಯತಕ್ಕ ಗಿರಿಜಾ ಕಲ್ಯಾಣ ಮಹೋತ್ಸವ ಕಾರ್ಯಕ್ರಮವು ಜೂ.7 ರಿಂದ 12ರವರೆಗೆ ನಡೆಯಲಿದೆ.

7 ರಂದು ಸಂಜೆ 6 ಗಂಟೆಗೆ ಅನುಜ್ಞಾಪೂರ್ವಕ ಎಣ್ಣೆ ಅರಿಶಿಣ ಪ್ರಧಾನ ನಂತರ ರಾತ್ರಿ 8 ಗಂಟೆಗೆ ವರಪೂಜಾ ಮಹೋತ್ಸವ ನಡೆಯಲಿದೆ. 8 ರಂದು ಬೆಳಗ್ಗೆ 10 ಗಂಟೆಗೆ ಅಂಕುರಾರ್ಪಣ ಪೂರ್ವಕ ಕನ್ನಡಿ ಕಲಶ ತರುವುದು. ನಂತರ ಮಂಗಳಸ್ನಾನ, ಗ್ರಹಯಜ್ಞ ಪ್ರಾರಂಭವಾಗಿ ಸಂಜೆ 5 ಗಂಟೆಗೆ ಕಾಶಿಯಾತ್ರೆ ಮಹೋತ್ಸವವು ನಡೆಯುತ್ತದೆ. ರಾತ್ರಿ 8.10 ರಿಂದ 9 ಗಂಟೆಯವರೆಗೆ ಸಲ್ಲುವ ಶುಭ ಧನುರ್ ಲಗ್ನದಲ್ಲಿ ಅಕ್ಷತಾರೋಪಣೆ, ಧಾರಾಮಹೋತ್ಸವ, ಪ್ರಧಾನ ಹೋಮ, ಮಹಾಮಂಗಳಾರತಿ ಜರುಗಲಿದೆ.

9 ರಂದು ಪ್ರಾತಃಕಾಲ ಔಪಾಸನೆ ಉರುಟಣೆ ಉಯ್ಯಲೋತ್ಸವ, ರಾತ್ರಿ ಔಪಾಸನೆ ಉಯ್ಯಲೋತ್ಸವವು ನಡೆಯಲಿದೆ. 10ರಂದು ಪ್ರಾತಃಕಾಲ ಔಪಾಸನೆ ಉರುಟಣೆ ಉಯ್ಯಲೋತ್ಸವ, ರಾತ್ರಿ ಔಪಾಸನೆ ಪಾಕಿನಿ ಮಹೋತ್ಸವವು ಜರುಗಲಿದೆ. 11ರಂದು ಪ್ರಾತಃಕಾಲ ಔಪಾಸನೆ ಉರುಟಣೆ ಉಯ್ಯಲೋತ್ಸವ, ರಾತ್ರಿ ಔಪಾಸನೆ ಶೇಷಹೋಮ, ನಾಕಬಲಿ, ಹೊಳಲು ಸುತ್ತುವುದು ಗಜಾರೋಹಣ ಪೂಜೆ, ಗೃಹಪ್ರವೇಶ ಮಹೋತ್ಸವ ಹಾಗೂ 12ರಂದು ಪ್ರಾತಃಕಾಲ ದೇವತಾ ಉದ್ವಾಸನೆ, ವಿವಾಹ ದೀಕ್ಷಾ ವಿಸರ್ಜನೆ ನಂತರ ಸ್ಥಂಭ ಪೂಜಾ ರಾತ್ರಿ ಪುಷ್ಪಾಂದೋಳಿಕೋತ್ಸವ, ಶಯನೋತ್ಸವವೂ ನಡೆಯಲಿದೆ. ಗಿರಿಜಾ ಕಲ್ಯಾಣ ಮಹೋತ್ಸವದ ಪ್ರತಿದಿನ ಸಂಜೆ ಸಂಗೀತ, ಹರಿಕಥೆ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net