

ಚಾಮರಾಜನಗರ : ಜಿಲ್ಲಾ ದಸರಾ ಮಹೋತ್ಸವದ ಅಂಗವಾಗಿ ಶ್ರೀಚಾಮರಾಜೇಶ್ವರ ದೃವಾಸ್ಥಾನದ ಮುಂಭಾಗದ ಪ್ರಧಾನ ವೇದಿಕೆಯಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳು ನೋಡುಗರ ಕಣ್ಮನ ಸೆಳೆಯಿತು. ನಗರದ ಹೃದಯ ಭಾಗದಲ್ಲಿರುವ ಶ್ರೀಚಾಮರಾಜೇಶ್ವರ ದೇವಸ್ಥಾನದ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಚಿವ ಕೆ.ವೆಂಕಟೇಶ್ ಉದ್ಘಾಟಿಸಿದರು.
ತಾಲೂಕಿನ ಉತ್ತುವಳ್ಳಿ ಮಹದೇವಸ್ವಾಮಿ ತಂಡದ ಸ್ಯಾಕೋ್ಸೆೆನ್ ವಾದನ, ಕೊಂಗರಹಳ್ಳಿ ಕೆ.ಎಚ್.ವಿನ್ಮಯಿ ನಡೆಸಿಕೊಟ್ಟ ಭರತನಾಟ್ಯ ಮತ್ತು ಶ್ರೀಶಾರದ ನೃತ್ಯ ಶಾಲೆಯ ನೃತ್ಯರೂಪಕ ನೋಡುಗರ ಗಮನವನ್ನು ಸೆಳೆಯಿತು. ಚೆನ್ನಮ್ಮ, ಲಕ್ಷ್ಮಮ್ಮ, ಮಾಳಗರಸಮ್ಮ ತಂಡದಿಂದ ಸೋಬಾನೆ ಪದ, ಚಂದ್ರಶೇಖರ್, ಮಂಜುನಾಥ್, ಪರಶಿವಮೂರ್ತಿ, ಮಹದೇವಯ್ಯ, ಮಂಜುನಾಥ್‌ಶೆಟ್ಟಿ ತಂಡದ ಭಕ್ತಿಗೀತೆ ಗಾಯನ, ಬಸವರಾಜು, ಬಾಗಳಿ ಮಹದೇವಸ್ವಾಮಿ, ಎಸ್.ಚರಣ್, ಎಸ್.ನಟರಾಜು ಮತ್ತು ತಂಡದ ಭಾವಯಾನ ಸುಗಮ ಸಂಜೆ, ಎಸ್.ಶಾಂತರಾಜು, ಎಂ.ಕಲೆ ನಟರಾಜು, ಎಸ್.ಪಿ.ನಾಗರಾಜು, ಜೈಗುರು, ಎಂ.ಆರ್.ಲೋಕೇಶ್ ತಂಡದ ಜಾನಪದ ಗೀತೆಗಳ ಗಾಯನ ಪ್ರೇಕ್ಷಕಕರ ಮನಸೂರೆಗೊಳಿಸಿತು.
ಶ್ರೀಭುವನೇಶ್ವರಿ ಕನ್ನಡ ಯುವ ವೇದಿಕೆ ವತಿಯಿಂದ ನಡೆಸಿ ಕೊಟ್ಟು ಶ್ರೀಚಾಮುಂಡೇಶ್ವರಿ ನೃತ್ಯ ರೂಪಕ ಭಕ್ತಿ ಭಾವ ಹರಿಸಿತು. ರಂಗ ಲಕ್ಷ್ಮಣಂ ೌಂಡೇಷನ್‌ನ ನೃತ್ಯ ರೂಪಕ, ಸಿ.ಕೆ.ಕುಮಾರ್, ಶೇಷಣ್ಣ ಸ್ವಾಮಿ, ವಿ.ರಾಮದಾಸ್, ಮಹೇಶ್ ತಂಡದ ಭಾವಯಾನ ಸುಗಮ ಸಂಗೀತ ಮತ್ತು ಗುಂಡ್ಲುಪೇಟೆಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು, ಹಂಗಳ ಸರ್ಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು, ಗುಂಡ್ಲುಪೇಟೆಯ ಮೋಹನ್ ಮತ್ತು ತಂಡ, ಗಾಳಿಪುರ ಬಡಾವಣೆಯ ವೇಣು ಮತ್ತು ತಂಡ ನೃತ್ಯೋತ್ಸವ ನಡೆಸಿಕೊಟ್ಟರು.