ರೈಲ್ವೆ ಹಳಿಯ ಬಳಿ ಯುವಕನ ಶವ ಪತ್ತೆ

kiran
Published on

ಚಾಮರಾಜನಗರ: ನಗರದ ಹೊರ ವಲಯದ ಬೇಡರಪುರ ರೈಲ್ವೆ ಕಂಬಿ ಬಳಿ ಮಂಗಳವಾರ ಬೆಳಗ್ಗೆ ಯುವಕನ ಮೃತದೇಹ ಪತ್ತೆಯಾಗಿದೆ.

ನಗರದ ಚೆನ್ನೀಪುರಮೋಳೆ ನಿವಾಸಿ ಕಿರಣ್(22) ಮೃತ ಯುವಕ. ಗಾರೆ ಕೆಲಸ ಮಾಡುತ್ತಿದ್ದ ಈತನಿಗೆ ಮದುವೆಯಾಗಿ ಮೂರು ತಿಂಗಳ ಮಗುವಿದೆ. ಕೆಲವು ದಿನಗಳ ಹಿಂದೆ ಕಾಲಿನ ಮೂಳೆ ಮುರಿದಿತ್ತು. ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದ. ಸೋಮವಾರ ರಾತ್ರಿ ಮನೆಯಿಂದ ಹೊರಗೆ ಹೋದವನು ಮತ್ತೆ ಮನೆಗೆ ಹಿಂದಿರುಗಿಲ್ಲ. ಕರೆ ಮಾಡಿದರೆ ಸಂಪರ್ಕಕ್ಕೆ ಸಿಗುತ್ತಿರಲಿಲ್ಲ.

ಮಂಗಳವಾರ ಬೆಳಗ್ಗೆ ಬೇಡರಪುರದ ರೈಲ್ವೆ ಹಳಿಯ ಬಳಿ ಕಿರಣ್ ಮೃತದೇಹ ಪತ್ತೆಯಾಗಿದೆ. ತಲೆ ಭಾಗಕ್ಕೆ ರೈಲು ಡಿಕ್ಕಿ ಹೊಡೆದಿರುವ ಪರಿಣಾಮ ಛಿದ್ರವಾಗಿದೆ. ಸಮೀಪದಲ್ಲೇ ಬೈಕ್ ಪತ್ತೆಯಾಗಿದೆ. ಮೃತದೇಹವನ್ನು ಜಿಲ್ಲಾಸ್ಪತ್ರೆಯಲ್ಲಿ ಮರಾಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಲಾಯಿತು. ನಂಜನಗೂಡು ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net