ಐಪಿಎಲ್ ಮಾದರಿಯಲ್ಲಿ ಕ್ರಿಕೆಟ್ ಟೂರ್ನ್‌ಮೆಂಟ್

14chn3
Published on

ಚಾಮರಾಜನಗರ: ಮಾಜಿ ರಾಷ್ಟ್ರಪತಿ ಡಾ.ಎಪಿಜೆ ಅಬ್ದುಲ್‌ಕಲಾಂ ಸ್ಮರಣಾರ್ಥ ನ. 3 ರಿಂದ 5 ರವರಗೆ ಆಯೋಜಿಸಿರುವ ಕ್ರಿಕೆಟ್ ಪಂದ್ಯಾವಳಿಗೆ ಐಪಿಎಲ್ ಮಾದರಿಯಲ್ಲಿ ಹರಾಜು ಪ್ರಕ್ರಿಯೆ ನಡೆಯಿತು.

ನಗರದ ಮೌಲಾನ ಆಜಾದ್ ಕಮ್ಯೂನಿಟಿ ಹಾಲ್‌ನಲ್ಲಿ ಬ್ರದರ್ಸ್ ಕ್ರಿಕೆಟ್ ಕ್ಲಬ್ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಾ.ಎಪಿಜೆ ಅಬ್ದುಲ್‌ಕಲಾಂ ಮೆಮೋರಿಯಲ್ ಕಪ್-3 ಕ್ರಿಕೆಟ್ ಪಂದ್ಯಾವಳಿಗೆ ಆಟಗಾರರ ಹರಾಜು ಪ್ರಕ್ರಿಯೆ ನಡೆಯಿತು. ಸುಮಾರು 6 ತಂಡಗಳು ಭಾಗವಹಿಸಿದ್ದವು.

ಕಾರ್ಯಕ್ರಮದಲ್ಲಿ ಮದೀನಾ ಮಸೀದಿ ಗುರುಗಳಾದ ಸೈಯದ್ ಮೊಕ್ತಾರ್, ಶ್ರೀ ಸಿದ್ದಮಲ್ಲೇಶ್ವರ ವಿರಕ್ತ ಮಠದ ಪೀಠಾಧ್ಯಕ್ಷ ಶ್ರೀ ಚನ್ನಬಸವಸ್ವಾಮೀಜಿ, ಬಳ್ಳಾರಿ ಅಯ್ಯೂಬ್, ಮದೀನಾ ಮಸೀದಿಯ ಅಧ್ಯಕ್ಷ ನಯೀಂ ಉಲ್ಲಾ ಹಕ್, ಇರ್ಫಾನ್ ಖಾನ್, ಪ್ರಸನ್ನಕುಮಾರ್, ಜುಬೇರ್ ಉಲ್ ಹಕ್, ನಯಾಜ್ ಪಾಷ, ಸುದರ್ಶನ್ ರೆಡ್ಡಿ, ಸೈಯದ್ ಅಲೀಂ, ತೌಸೀಫ್ ಖಾನ್, ಗ್ರಾನೈಟ್ ಮಾಲೀಕರಾದ ಸೈಯದ್ ಅಜೀಜ್, ನಗರಸಭಾ ಸದಸ್ಯ ಅಬ್ರಾರ್ ಅಹಮದ್, ಅಯೋಜಕರಾದ ನವಾಜ್ ಷರೀಪ್ ಅಬ್ದುಲ್ ರೆಹಮಾನ್, ಮುಸಾಯಿದ್ ಉಲ್ಲಾ, ಜುಬೇರ್ ಉಲ್ಲಾ, ಸೈಯದ್ ವಾಸೀಂ ಅಬ್ದುಲ್, ಜಹೀದ್,ಜಬಿವುಲ್ಲಾ ಖಾನ್ ಹಾಗೂ ಇತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net