ಮದಕರಿನಾಯಕ ಜಯಂತಿ ಆಚರಿಸಿ

14chn2
Published on

ಚಾಮರಾಜನಗರ : ಮದಕರಿನಾಯಕರ ಜಯಂತಿಯನ್ನು ಸರ್ಕಾರದಿಂದಲೇ ಆಚರಿಸಬೇಕು ಎಂದು ಯುವ ಮುಖಂಡ ಶಿವುವಿರಾಟ್ ಒತ್ತಾಯಿಸಿದರು.

ನಗರದ ಶ್ರೀಚಾಮರಾಜೇಶ್ವರ ಉದ್ಯಾನವನದ ಮುಂಭಾಗ ಶುಕ್ರವಾರ ಹಮ್ಮಿಕೊಂಡಿದ್ದ ರಾಜವೀರ ಮದಕರಿನಾಯಕ ಜಯಂತಿ ಕಾರ್ಯಕ್ರಮದಲ್ಲಿ ಪುಷ್ಷಾರ್ಚನೆ ಮಾಡಿ ಮಾತನಾಡಿದರು. ದುರ್ಗದಹುಲಿ ರಾಜವೀರ ಮದಕರಿನಾಯಕರು ನಾಡಿಗೆ ಅಪಾರ ಕೊಡುಗೆ ನೀಡಿದ್ದಾರೆ. ಅವರ ಅವಧಿಯಲ್ಲಿ ಕೆರೆ, ಕಟ್ಟೆ, ಮಠ, ಮಂದಿರಗಳನ್ನು ನಿರ್ಮಿಸುವ ಮೂಲಕ ಸಮಾಜಮುಖಿ ಕಾರ್ಯಗಳನ್ನೂ ಮಾಡಿದ್ದಾರೆ ಎಂದರು.

ಮದಕರಿನಾಯಕರು ಯಾವುದೇ ತಂತ್ರಜ್ಞಾನ, ವಿಜ್ಞಾನ ವ್ಯವಸ್ಥೆ ಇಲ್ಲದಂತಹ ಸಂದರ್ಭದಲ್ಲಿ ಬೃಹತ್ ಕಲ್ಲು, ಬಂಡೆಗಳನ್ನಿಟ್ಟು ಹಲವು ಕೋಟೆಗಳನ್ನು ನಿರ್ಮಾಣ ಮಾಡಿದ್ದರು. ಪ್ರಸ್ತುತ ಸಂದರ್ಭದಲ್ಲಿ ಎಲ್ಲ ರೀತಿಯ ತಂತ್ರಜ್ಞಾನ, ಬೃಹತ್ ಯಂತ್ರೋಪಕರಣಗಳಿದ್ದರೂ ಅಂತಹ ಕೋಟೆಗಳನ್ನು ನಿರ್ಮಾಣ ಮಾಡುವುದು ಅಸಾಧ್ಯ ಎನ್ನುವಂತಾಗಿದೆ. ಹಿಂದೂ ಧರ್ಮದ ರಕ್ಷಕರಾಗಿದ್ದ, ಅವರನ್ನು ಜಾತಿ, ಧರ್ಮಕ್ಕೆ ಸೀಮಿತಗೊಳಿಸದೆ ಅವರ ತತ್ವಾದರ್ಶಗಳನ್ನು ಮೈಗೂಡಿಸಿಕೊಂಡು ಮುನ್ನೆಡೆಯಬೇಕಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ನಗರಸಭಾ ಮಾಜಿ ಅಧ್ಯಕ್ಷ ಸುರೇಶ್ ನಾಯಕ, ಯುವ ಮುಖಂಡರಾದ ಬುಲೆಟ್‌ಚಂದ್ರು, ಕಿರಣ್, ಸಿ.ವಿ.ಮಣಿಕಂಠ, ರಾಮಸಮುದ್ರ ಶಿವಣ್ಣ, ಮಹೇಶ್, ರಮೇಶ್ ನಾಯಕ, ಪ್ರವೀಣ್, ರಘು, ಮಹೇಶ್, ಪ್ರದೀಪ್, ನಾಗಚೇತನ್, ಮಣಿನಾರಾಯಣ್, ರಾಕೇಶ್, ರಾಘವೇಂದ್ರ, ಪ್ರವೀಣ್, ಸಂತು, ಪ್ರಸನ್ನ, ಅರ್ಜುನ್, ಫೃಥ್ವಿ, ಬಸವರಾಜು ಹಾಗೂ ಇತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net