ಮುಚ್ಚುವ ಭೀತಿಯಲ್ಲಿ ಶಿಶುಪಾಲನಾ ಕೇಂದ್ರ

10chn6
Published on

ಚಾಮರಾಜನಗರ: ನಗರದ 19ನೇ ವಾರ್ಡ್‌ನಲ್ಲಿರುವ ಶಿಶುಪಾಲನಾ ಕೇಂದ್ರಕ್ಕೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಸೋಮವಾರ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನಗರದ ನಾಯಕರ ಬೀದಿಯಲ್ಲಿ ಕಾರ್ಮಿಕ ಇಲಾಖೆ, ಎಜುಪಾರ್ಕ್ ಸಂಸ್ಥೆ ಸಹಯೋಗದಲ್ಲಿ ನಡೆಯುತ್ತಿರುವ ಶಿಶು ಪಾಲನಾ ಕೇಂದ್ರಕ್ಕೆ ಭೇಟಿ ನೀಡಿ ಮಾತನಾಡಿ, ಶಿಶುಪಾಲನಾ ಕೇಂದ್ರವನ್ನು ಮುಚ್ಚಿ ಬಿಡುತ್ತಾರೆ ಎಂದು ಹೇಳಲಾಗುತ್ತಿದೆ. ಇದನ್ನು ಮುಚ್ಚದಂತೆ ಕ್ರಮಕೈಗೊಳ್ಳಬೇಕು ಎಂಬ ಮನವಿ ಮೇರೆಗೆ ಶಿಶುಪಾಲನಾ ಕೇಂದ್ರ ಭೇಟಿ ನೀಡಲಾಗಿದೆ. ಈ ಕೇಂದ್ರದಲ್ಲಿ 35 ಮಕ್ಕಳು ಇರಬೇಕು. ಆದರೆ ಇಲ್ಲಿ 35 ಮಕ್ಕಳು ಇಲ್ಲ.

ಇಲ್ಲಿಗೆ ಬರುವ ಮಕ್ಕಳಿಗೆ ಪುಡ್ ಕೊಟ್ಟಿಲ್ಲ. ಮಕ್ಕಳು ಕೂರಲು ಜಾಗ ಕಡಿಮೆ ಇದೆ. ಕೆಲಸ ಮಾಡುವ ಶಿಕ್ಷಕಿಗೆ ಸಂಬಳ ಕೂಡ ಕಡಿಮೆ ಕೊಡುವುದಾಗಿ ತಿಳಿದು ಬಂದಿದೆ. ಕಾರ್ಮಿಕ ಇಲಾಖೆ ಸರಿಯಾಗಿ ವೇತನ ನೀಡದಿರುವುದು ಒಂದು ದುರಂತವಾಗಿದೆ ಇದಕ್ಕೆ ಸಂಬಂಧಿಸಿದ ಮೇಲಾಧಿಕಾರಿಗಳ ತೆಯಲ್ಲಿ ಚರ್ಚಿಸಿ ಕ್ರಮಕೈಗೊಳ್ಳಲಾಗುವುದು ಎಂದರು.

ಹಿರಿಯ ಕಾರ್ಮಿಕಾಧಿಕಾರಿ ವೀಣಾ, ರಾಜೇಶ್ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net