ರಾಜೇಂದ್ರ ಶ್ರೀಗಳು ಬಡವಿದ್ಯಾರ್ಥಿಗಳ ದಾರಿದೀಪ

08chn4
Published on

ಚಾಮರಾಜನಗರ: ಸುತ್ತೂರು ಮಠದ ಡಾ.ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅಂದಿನ ಕಾಲದಲ್ಲೇ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಲಕ್ಷಾಂತರ ವಿದ್ಯಾರ್ಥಿಗಳಿಗೆ ನೆರವಾದರು ಎಂದು ಜೆಎಸ್‌ಎಸ್ ವಿದ್ಯಾಪೀಠದ ಸಾಮಾನ್ಯ ವಿಭಾಗದ ನಿರ್ದೇಶಕ ಕೆ.ಎಲ್.ರೇವಣ್ಣ ಹೇಳಿದರು.

ತಾಲೂಕಿನ ಕುದೇರು ಶಂಕರ ಮಠದ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಸುತ್ತೂರು ಮಠದ ಡಾ. ಶಿವರಾತ್ರಿ ರಾಜೇಂದ ್ರಸ್ವಾಮೀಜಿ 108 ನೇ ಜಯಂತೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಶಿವರಾತ್ರಿ ರಾಜೇಂದ್ರ ಶ್ರೀಗಳು ತಮ್ಮ ವಿದ್ಯೆಯನ್ನು ಮೊಟಕುಗೊಳಿಸಿ, ಸ್ವತಂತ್ರ ಪೂರ್ವದಲ್ಲೇ ತಮ್ಮ ಚಿನ್ನದ ಕರಡಿಗೆಯನ್ನು ಮಾರಿ ದೇಶ ವಿದೇಶಗಳಲ್ಲಿ ವಿದ್ಯಾರ್ಥಿ ನಿಲಯಗಳನ್ನು ಸ್ಥಾಪಿಸಿದರು. ಈ ಮೂಲಕ ಬಡವರು, ದೀನದಲಿತರು ಸೇರಿದಂತೆ ಎಲ್ಲಾ ವರ್ಗದ ಬಡ ವಿದ್ಯಾರ್ಥಿಗಳ ಪಾಲಿಗೆ ದಾರಿದೀಪವಾದರು. ಆ ಕಾಲದಲ್ಲೇ ಆಸ್ಪತ್ರೆಗಳನ್ನು ನಿರ್ಮಿಸಿ ಅಕ್ಷರ ಜ್ಞಾನ, ಅನ್ನ, ಆರೋಗ್ಯ ದಾಸೋಹ ಸೇವೆಯನ್ನು ಒದಗಿಸಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ನೆರವಾದರು ಎಂದರು.

ಕಾರ್ಯಕ್ರಮದಲ್ಲಿ ಕುದೇರು ಶಂಕರ ಮಠದ ಅಧ್ಯಕ್ಷರಾದ ನಟರಾಜ ಸ್ವಾಮೀಜಿ, ಕಬ್ಬಳ್ಳಿ ಮಠದ ಗುರುಸಿದ್ದ ಸ್ವಾಮೀಜಿ, ಚುಂಚನ ಹಳ್ಳಿ ಮಠದ ಶ್ರೀಚನ್ನಬಸವ ಸ್ವಾಮಿ, ಪಡುವಲ ಮಠದ ಶ್ರೀಪ್ರಭು ಸ್ವಾಮಿ, ಜೆಎಸ್‌ಎಸ್ ಸಂಸ್ಥೆಯ ಮಂಜುನಾಥ್, ಲಿಂಗರಾಜು, ಪುಟ್ಟಣ್ಣ, ನಾಗರಾಜಪ್ಪ, ಕುಮಾರಸ್ವಾಮಿ, ಸುಭೋಜ, ಶಿಕ್ಷಕರಾದ ವೀರಭದ್ರಪ್ಪ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net