ಆಧ್ಯಾತ್ಮಿಕ ಮಾರ್ಗದಿಂದ ನೆಮ್ಮದಿ ಸಾಧ್ಯ

08chn1
Published on

ಚಾಮರಾಜನಗರ: ಆಧ್ಯಾತ್ಮಿಕ ಮಾರ್ಗವನ್ನು ಅನುಸರಿಸುವ ಮೂಲಕ ಮಾನಸಿಕವಾಗಿ ನೆಮ್ಮದಿ ಸಾಧ್ಯ ಎಂದು ಸಾಲೂರು ಮಠದ ಪೀಠಾಧ್ಯಕ್ಷ ಶ್ರೀಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಸಲಹೆ ನೀಡಿದರು.

ನಗರದ ರಥದ ಬೀದಿಯಲ್ಲಿ ಶ್ರೀ ವಿದ್ಯಾಗಣಪತಿ ಮಂಡಳಿ ವತಿಯಿಂದ ಶನಿವಾರ ಆಯೋಜಿಸಿದ್ದ 61ನೇವರ್ಷದ ಶ್ರೀಸುದರ್ಶನ ಗಣಪತಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಮನುಷ್ಯನಿಗೆ ನೆಮ್ಮದಿ ಸಿಗಬೇಕಾದರೆ ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡುವ ಅಭಿರುಚಿಯನ್ನು ಮೈಗೂಡಿಸಿಕೊಳ್ಳಬೇಕು. ದೇವರ ಸ್ಮರಣೆಮಾಡುವುದು ಹಾಗೂ ದೇವಸ್ಥಾನಗಳಿಗೆ ಭೇಟಿ ನೀಡುವ ಮೂಲಕ ಪ್ರತಿಯೊಬ್ಬರೂ ಸುಖ, ಶಾಂತಿ, ನೆಮ್ಮದಿಯಿಂದ ಜೀವನ ನಡೆಸಲು ಸಾಧ್ಯವಿದೆ. ಪ್ರಸ್ತುತ ಒತ್ತಡದ ಬದುಕಿನಲ್ಲಿ ಪ್ರತಿಯೊಬ್ಬರಿಗೂ ಮಾನಸಿಕ ನೆಮ್ಮದಿ ಅಗತ್ಯವಾಗಿದೆ. ಆಧ್ಯಾತ್ಮಿಕ ಮಾರ್ಗದ ಮೂಲಕ ಅದನ್ನು ಸಾಕ್ಷಾತ್ಕರಿಸಿಕೊಳ್ಳಬಹುದು ಎಂದರು.

ನಗರದ ಶ್ರೀವಿದ್ಯಾ ಗಣಪತಿ ಮಂಡಳಿ ವತಿಯಿಂದ 61ನೇ ವರ್ಷದ ಶ್ರೀಸುದರ್ಶನ ಗಣಪತಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಬಹಳ ಅರ್ಥಪೂರ್ಣವಾಗಿ ನೆರವೇರಿಸಲಾಗುತ್ತಿದೆ. ಯಾವುದೇ ಕೆಲಸವನ್ನು ಪ್ರಾರಂಭಿಸಬೇಕಾದರೆ ಗಣೇಶನ ಸ್ಮರಣೆ ಮಾಡಿದರೆ ಯಶಸ್ಸು ಸಿಗಲಿದೆ. ಆಕಾರಣಕ್ಕೆ ಮೊದಲ ಪೂಜೆ ವಿನಾಯಕಿನಿಗೆ ಎಂದು ಹೇಳಲಾಗುತ್ತದೆ ಎಂದು ಹೇಳಿದರು.
ನಂಜನಗೂಡಿನ ಭರತನಾಟ್ಯ ಕಲಾವಿದೆ ರಂಜಿತಾಸೋಮಶೇಖರ್ ತಂಡದಿಂದ ಭರತನಾಟ್ಯ ಕಾರ್ಯಕ್ರಮ ನಡೆಯಿತು. ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಜಿ.ಬಂಗಾರು ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಶ್ರೀ ವಿದ್ಯಾಗಣಪತಿ ಮಂಡಳಿ ಅಧ್ಯಕ್ಷ ಕೃಷ್ಣ, ಕಾರ್ಯದರ್ಶಿ ವಿರಾಟ್‌ಶಿವು, ಬಾಲಸುಬ್ರಮಣ್ಯಂ, ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಮೂಡ್ಲುಪುರ ನಂದೀಶ್, ಸುರೇಶ್ ನಾಯಕ, ಶಿವಣ್ಣ, ಗಣೇಶ್ ದೀಕ್ಷಿತ್. ನಗರಸಭೆ ಸದಸ್ಯ ಸುದರ್ಶನ್‌ಗೌಡ, ಮಹೇಶ್, ಆನಂದ್ ಭಗೀರಥ, ನವೀನ್, ಸಿದ್ದಲಿಂಗ ಮೂರ್ತಿ, ಮಂಜು, ಮಹದೇವ ನಾಯಕ ಹಾಗೂ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net