ಅಂಗವಿಕಲರಿಗೆ ಚೈತನ್ಯ ತುಂಬಿ

05chn3
Published on

ಚಾಮರಾಜನಗರ: ವಿಕಲ ಚೇತನ ಮಕ್ಕಳನ್ನು ಮುಖ್ಯ ವಾಹಿನಿಗೆ ಕರೆತನ್ನಿ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಯೋಜನೆ ಅಧಿಕಾರಿ ಪ್ರಭುಸ್ವಾಮಿ ತಿಳಿಸಿದರು.

ನಗರದ ನ್ಯಾಯಾಲಯ ರಸ್ತೆಯಲ್ಲಿರುವ ಮೊಬಲಿಟಿ ಆ್ ಇಂಡಿಯಾ ಸಂಸ್ಥೆ ಆವರಣದಲ್ಲಿ ಮೊಬಲಿಟಿ ಇಂಡಿಯಾ, ಜಿಲ್ಲಾ ಪಂಚಾಯತಿ, ಅಂಗವಿಕಲರ ಕಲ್ಯಾಣ ಇಲಾಖೆ, ಶಾಲಾ ಶಿಕ್ಷಣ ಇಲಾಖೆ ಸಹಕಾರದೊಂದಿಗೆ ಬುಧವಾರ ಆಯೋಜಿಸಿದ್ದ ದೈಹಿಕ ವಿಕಲಚೇತನ ಮಕ್ಕಳಿಗೆ ಅಗತ್ಯ ಇರುವ ಸಾಧನೆ ಸಲಕರಣೆಗಳ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮೊಬೈಲಿಟಿ ಇಂಡಿಯಾ ಸಂಸ್ಥೆ ದೇಶ,ಅಂತಾರಾಷ್ಟ್ರೀಯ ಸಂಸ್ಥೆಯಾಗಿ ಉತ್ತಮ ಸಾಧನೆ ಮಾಡಿದೆ
ವಿಕಲಚೇತನ ಮಕ್ಕಳು ಇತರ ಮಕ್ಕಳಂತೆ ಸಹ ವಿದ್ಯಾಭ್ಯಾಸ ಕ್ರೀಡೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಬೇಕಾಗುವ ಎಲ್ಲಾ ಸಹಕಾರವನ್ನು ಜಿಲ್ಲಾ ಪಂಚಾಯಿತಿಯಿಂದ ನೀಡಲಾಗುತ್ತಿದೆ ಎಂದು ತಿಳಿಸಿದರು.

ಮೊಬಲಿಟಿ ಇಂಡಿಯಾ ಸಂಸ್ಥೆ ಹಿರಿಯ ವ್ಯವಸ್ಥಾಪಕ ಎಸ್.ಆನಂದ್, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಜಿ.ಬಂಗಾರು, ಅಂಗವಿಕಲರ ಕಲ್ಯಾಣಾಧಿಕಾರಿ ಸುರೇಶ್, ಶಾಲಾ ಶಿಕ್ಷಣ ಇಲಾಖೆಯ ಉಮೇಶ್, ರೆಬೆಲೋ, ಮೊಬೈಲ್ ಇಂಡಿಯಾ ಸಂಸ್ಥೆ ರಾಜಣ್ಣ, ಸುಧಾಕರ್, ಮಂಜೇಶ್ ಹಾಗೂ ಇತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net