ನಾಣ್ಯಗಳು ದೇಶದ ಇತಿಹಾಸ ಸಾರುತ್ತದೆ

05chn1
Published on

ಚಾಮರಾಜನಗರ: ದೇಶದ ಇತಿಹಾಸ ಮತ್ತು ಪರಂಪರೆಗಳ ಬಗ್ಗೆ ಹೆಚ್ಚಿನ ಹರಿವು ಮೂಡಬೇಕಿದ್ದರೆ ಪ್ರಾಚೀನ ನಾಣ್ಯಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳಬೇಕು ಎಂದು ನಾಣ್ಯ ಸಂಗ್ರಹಗಾರ ಮತ್ತು ನಿವೃತ್ತ ಇಂಜಿನಿಯರ್ ಎಚ್.ಕೆ.ರಾಮರಾವ್ ತಿಳಿಸಿದರು.

ತಾಲೂಕಿನ ಕುದೇರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಕಾಲೇಜು ಶಿಕ್ಷಣ ಇಲಾಖೆ, ಕುದೇರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಐ.ಕ್ಯೂ.ಎ.ಸಿ ಹಾಗೂ ಅರ್ಥಶಾಸ್ತ್ರ ಮತ್ತು ಇತಿಹಾಸ ವಿಭಾಗಗಳ ಸಹಯೋಗದಲ್ಲಿ ಆಯೋಜಿಸಿದ್ದ ಐತಿಹಾಸಿಕ ನಾಣ್ಯಗಳ 155ನೇ ಅಪರೂಪದ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.

ವಾಸ್ತುಶಿಲ್ಪ, ಶಾಸನ ಶಾಸ್ತ್ರದಂತೆ ನಾಣ್ಯಶಾಸ್ತ್ರ ಸಹ ತುಂಬಾ ಪ್ರಾಮುಖ್ಯ ಪಡೆದಿದೆ. ಇತಿಹಾಸಕಾರರಿಗೆ ಪ್ರಮುಖವಾದ ಆಕರಗಳಲ್ಲಿ ನಾಣ್ಯವು ಸಹ ಮುಖ್ಯವಾಗಿದೆ. ಪ್ರಾಚೀನ ಐತಿಹಾಸಿಕ ಕಾಲದ ನಾಣ್ಯಗಳ ವೀಕ್ಷಣೆ ಭಾಗ್ಯವೆಂದೇ ಭಾವಿಸಬೇಕು. ನಾಣ್ಯಗಳನ್ನು ಬರಿ ನೋಡುವುದಷ್ಟೇ ಅಲ್ಲ. ಇದರಿಂದ ನಮಗೆ ಸ್ಪೂರ್ತಿ ಬರಬೇಕು. ಇತಿಹಾಸ, ಪರಂಪರೆ ದೇಶದ ಬಗ್ಗೆ ಗೌರವ ಮೂಡುತ್ತದೆ. ನಾಣ್ಯಗಳ ಬಗ್ಗೆ ಹೆಚ್ಚು ತಿಳಿದುಕೊಳ್ಳಬೇಕು ಎಂದು ಸಲಹೆ ಮಾಡಿದರು.

ಪ್ರತಿಯೊಂದು ನಾಣ್ಯವು ಆಯಾ ಕಾಲದ ಇತಿಹಾಸದ ಬಗ್ಗೆ ಮಾಹಿತಿ ನೀಡಲಿದೆ. ಭಾರತದ ಚರಿತ್ರೆ ತಿಳಿಯಲು ನಾಣ್ಯಗಳು ಸಹಕಾರಿಯಾಗಿವೆ. ಇಂತಹ ಅಪರೂಪದ ನಾಣ್ಯಗಳ ಪ್ರದರ್ಶನವನ್ನು ಸದುಪಯೋಗ ಮಾಡಿಕೊಳ್ಳಬೇಕೆಂದು ತಿಳಿಸಿದರು.

ಕುದೇರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಥಿಯೋಡರ್ ಲೂಥರ್, ಸಹಾಯಕ ಪ್ರಾಧ್ಯಪಕಿ ಶಶಿಕಲಾ ವಾಣಿ, ಮಹೇಂದ್ರ, ಮಮತ, ಕವಿತಾ, ಮಧುಸೂಧನ್, ಶ್ರೀನಿವಾಸ್ ಹಾಗೂ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net