

ಚಾಮರಾಜನಗರ: ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಪರಿಶಿಷ್ಟ ಜಾತಿ/ ಪಂಗಡ, ಹಿಂದುಳಿದ ವರ್ಗದವರಿಗೆ ಮೀಸಲಾಗಿರುವ ಅಂಗಡಿಗಳನ್ನು ಮೇಲ್ವರ್ಗದವರು ವಶಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿ ಶ್ರೀಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಯೂ ಆಗಿರುವ ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಕಾತ್ಯಾಯಿನಿದೇವಿಗೆ ದೂರು ಸಲ್ಲಿಕೆಯಾಗಿದೆ.
ನಗರದ ಜಿಲ್ಲಾಡಳಿತ ಭವನದಲ್ಲಿ ಮುಖಂಡ ಬಸವನಪುರ ರಾಜಶೇಖರ್ ನೇತೃತ್ವದಲ್ಲಿ ಯುವಕರು ಶುಕ್ರವಾರ ದೂರು ಸಲ್ಲಿಸಿದ್ದಾರೆ. ಪರಿಶಿಷ್ಠ ಜಾತಿ, ಹಿಂದುಳಿದ ವರ್ಗಗಳಿಗೆ ಮೀಸಲಾಗಿರುವ ಅಂಗಡಿ ಮಳಿಗೆಗಳನ್ನು ವಶಪಡಿಸಿಕೊಂಡಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಂಡು ಸ್ಥಳೀಯ ಅರ್ಹ ಫಲಾನುಗಳಿಗೆ ನ್ಯಾಯ ದೊರಕಿಸಿಕೊಡಬೇಕು ಮನವಿ ಮಾಡಿದರು. ರಾಮಸಮುದ್ರ ಎಂ.ಶಿವಕುಮಾರ್, ಲಿಂಗರಾಜು, ಹರವೆ ನಾಗೇಶ್, ನಾಗಯ್ಯ ಹೊನ್ನೆಗೌಡನಹಳ್ಳಿ, ಯಳಂದೂರು ಮಲ್ಲಿಕ್, ಮಹದೇಶ್ವರ ಬೆಟ್ಟದ ಮಂಜುನಾಥ್, ಮಹೇಶ್, ನಾಗೇಶ್, ಹರಿಕೃಷ್ಣ, ಆರ್.ಕಾರ್ತಿಕ್ ಇತರರು ಇದ್ದರು.