ಯುವಕರು ಭಗತ್‌ಸಿಂಗ್ ಆದರ್ಶ ಪಾಲಿಸಿ

28chn1
Published on

ಚಾಮರಾಜನಗರ: ಶೋಷಣೆ, ದಬ್ಬಾಳಿಕೆ ಮತ್ತು ಅನ್ಯಾಯದ ವಿರುದ್ಧ ಹೋರಾಡಿದಾಗ ಮಾತ್ರ ಭಗತ್‌ಸಿಂಗ್ ಅವರಿಗೆ ನಾವು ಗೌರವಸಲ್ಲಿಸಬಹುದಾಗಿದೆ ಎಂದು ಭಗತ್ ಯುವ ಯುವಸೇನೆ ಅಧ್ಯಕ್ಷ ಕಾಂತರಾಜು ತಿಳಿಸಿದರು.

ತಾಲೂಕಿನ ಕೋಡಿಮೋಳೆ ಗ್ರಾಮದ ಭಗತ್ ಸಿಂಗ್ ವೃತ್ತದಲ್ಲಿ ಭಗತ್ ಯುವಸೇನೆ ಹಾಗೂ ಎಐಡಿ ವೈಓ ಘಟಕದ ವತಿಯಿಂದ ಬುಧವಾರ ಆಯೋಜಿಸಿದ್ದ 116ನೇ ಭಗತ್‌ಸಿಂಗ್ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಭಗತ್‌ಸಿಂಗ್ ಸ್ವಾತಂತ್ರ ಚಳುವಳಿ ಸಂದರ್ಭದಲ್ಲಿ ಒಬ್ಬ ಮನುಷ್ಯ ಇನ್ನೊಬ್ಬ ಮನುಷ್ಯನನ್ನು ದಬ್ಬಾಳಿಕೆ ಶೋಷಣೆ ಮಾಡುವಂತಹ ವ್ಯವಸ್ಥೆ ಇರಬಾರದು. ಬಡವ ಶ್ರೀಮಂತ ಅನ್ನುವ ಭೇದಭಾವ, ಶೋಷಣೆ ಇಲ್ಲದೆ ಇರುವ ಸಮಾಜವಾದಿ ದೇಶ ಭಾರತ ಆಗಬೇಕು ಎನ್ನುವ ಕನಸು ಕಂಡಿದ್ದರು. ಆದರೆ ಇಂದಿನ ಸಂದರ್ಭದಲ್ಲಿ ಅದು ನನಸಾಗಿಲ್ಲ. ಅದನ್ನು ನನಸು ಮಾಡುವ ನಿಟ್ಟಿನಲ್ಲಿ ದೇಶದ ಯುವಕರು, ವಿದ್ಯಾರ್ಥಿಗಳು ಪಣ ತೊಡಬೇಕು. ನಾವೆಲ್ಲರೂ ಶ್ರಮಿಸಬೇಕು .ಅನ್ಯಾಯದ ವಿರುದ್ಧ ಹೋರಾಟಗಳನ್ನು ಬೆಳೆಸಬೇಕಾಗುತ್ತದೆ. ಇದು ನಿಜವಾಗಿಯೂ ಭಗತ್ ಸಿಂಗ್ ಅವರಿಗೆ ನಾವು ನೀಡುವ ಗೌರವವಾಗಿದೆ ಎಂದರು.

ಈ ಸಂದರ್ಭದಲ್ಲಿ ಕುಮಾರ್, ದೇವರಾಜು, ಶಿವು, ಮಹೇಶ್ ,ರವಿಕುಮಾರ್ ,ಶೋಹನ್,ಮನು, ಚಂದ್ರಶೇಖರ್ ,ರಾಜೇಂದ್ರ ಮಾರಪ್ಪ ಗುರುಮೂರ್ತಿ ನಿಂಗರಾಜು, ಆನಂದ ಹಾಗೂ ಇತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net