ವರ್ಗಾವಣೆಗೊಂಡ ಆರ್.ವಿನಯ್‌ಕುಮಾರ್‌ಗೆ ಬೀಳ್ಕೊಡುಗೆ, ಅಧಿಕಾರ ವಹಿಸಿಕೊಂಡ ಎಸ್‌.ಪಿ.ಮಹೇಶ್‌ಗೆ ಸನ್ಮಾನ..

773c72ba-b3ec-4c85-ada9-40c9d148a3b8
Published on

ಚಾಮರಾಜನಗರ: ಚಾಮರಾಜನಗರ ಲೋಕೋಪಯೋಗಿ ಇಲಾಖೆಯಲ್ಲಿ ಕಾರ್ಯಪಾಲಕ ಅಭಿಯಂತರಾಗಿ ಸೇವೆ ಸಲ್ಲಿಸಿ ಬಡ್ತಿ ಹೊಂದಿ ಬೇರೆಡೆಗೆ ವರ್ಗಾವಣೆಯಾದ ಆರ್.ವಿನಯ್‌ಕುಮಾರ್ ಗೆ ಬೀಳ್ಕೊಡುಗೆ ಸನ್ಮಾನ, ಇಲಾಖೆ ನೂತನ ಕಾರ್ಯಪಾಲಕ ಅಭಿಯಂತರಾಗಿ ಅಧಿಕಾರ ವಹಿಸಿಕೊಂಡ ಎಸ್.ಪಿ.ಮಹೇಶ್ ಅವರನ್ನು ಇಲಾಖೆಯ ನೌಕರರು ಹಾಗೂ ಗುತ್ತಿಗೆದಾರರ ವತಿಯಿಂದ ಸನ್ಮಾನಿಸಲಾಯಿತು.

ನಗರದ ಲೋಕೋಪಯೋಗಿ ಇಲಾಖೆಯ ವಿಭಾಗೀಯ ಕಚೇರಿಯಲ್ಲಿ ನೌಕರರು ಹಾಗೂ ಗುತ್ತಿಗೆದಾರರು ಇಲಾಖೆಯಲ್ಲಿ ಕಾರ್ಯಪಾಲಕ ಅಭಿಯಂತರಾಗಿ ಸೇವೆ ಸಲ್ಲಿಸಿ ಬಡ್ತಿ ಹೊಂದಿ ಬೇರೆಡೆಗೆ ವರ್ಗಾವಣೆಯಾದ ಆರ್.ವಿನಯ್‌ಕುಮಾರ್ ಅವರಿಗೆ ಇಲಾಖೆಯ ನೌಕರರು ಹಾಗೂ ಗುತ್ತಿಗೆದಾರರ ವತಿಯಿಂದ ಬೀಳ್ಕೊಟ್ಟು ಸನ್ಮಾನಿಸಲಾಯಿತು. ಅದೇ ರೀತಿ ಇಲಾಖೆಯ ನೂತನ ಕಾರ್ಯಪಾಲಕ ಅಭಿಯಂತರಾಗಿ ಅಧಿಕಾರ ವಹಿಸಿಕೊಂಡ ಎಸ್.ಪಿ.ಮಹೇಶ್ ಅವರನ್ನು ಸನ್ಮಾನಿಸಿದರು.

ಬೀಳ್ಕೊಡುಗೆ ಸನ್ಮಾನ ಸ್ವೀಕರಿಸಿದ ಕಾರ್ಯಪಾಲಕ ಅಭಿಯಂತರಾದ ವಿನಯ್‌ಕುಮಾರ್ ಮಾತನಾಡಿ, ಜಿಲ್ಲೆ ಸಣ್ಣ ಜಿಲ್ಲೆಯಾಗಿದ್ದರು ಕೂಡ ಜನರು ಬಹಳ ಮುಗ್ದರು. ಇವರಿಗೊಂದಿಗೆ ಕೆಲಸ ನಿರ್ವಹಿಸಿರುವುದು ತುಂಬಾ ತೃಪ್ತಿ ತಂದಿದೆ ಎಂದರು.
ನೂತನ ಕಾರ್ಯಪಾಲಕ ಅಭಿಯಂತರಾಗಿ ಅಧಿಕಾರಿ ವಹಿಸಿಕೊಂಡ ಎಸ್.ಪಿ.ಮಹೇಶ್ ಇಲಾಖೆಯ ನೌಕರರು, ಗುತ್ತಿಗೆದಾರರ ಸಹಕಾರದಲ್ಲಿ ಉತ್ತಮ ಕೆಲಸ ಮಾಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಇಲಾಖೆಯ ಎಇಇ ಕೆಂಪರಾಜು, ತಾಂತ್ರಿಕ ಸಹಾಯಕರಾದ ರಾಮಸ್ವಾಮಿ, ಎಇಇ ಸದಾಶಿವಮೂರ್ತಿ, ಎ.ಎಸ್.ವಿನೋದ್, ಗುತ್ತಿಗೆದಾರ ಸಂಘದ ಜಿಲ್ಲಾಧ್ಯಕ್ಷ ಎಂ.ಎಸ್.ಮಾದಯ್ಯ, ತಾಲೂಕು ಅಧ್ಯಕ್ಷ ಬಂಗಾರು, ಸಿವಿಲ್ ಗುತ್ತಿಗೆದಾರರ ಸಂಘದ ಮಹದೇವಪ್ಪ, ವೈ.ಪಿ.ರಾಜೇಂದ್ರ, ಆಲೂರುರವಿ, ಚನ್ನಬಸಪ್ಪ, ನಾಗೇಶ್, ಎಸ್‌ಸಿ, ಎಸ್‌ಟಿ ಗುತ್ತಿಗೆದಾರರ ಸಂಘದ ಗೌರವಾಧ್ಯಕ್ಷ ಸಿ.ಕೆ.ಮಂಜುನಾಥ್, ಕಾರ್ಯದರ್ಶಿ ಚನ್ನಯ್ಯ, ಕಣ್ಣೇಗಾಲ ರಂಗನಾಯಕ, ಎಚ್.ಎಸ್.ನಾಗರಾಜು ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net