ಹೆಣ್ಣು ಮಕ್ಕಳಿಗೆ ಹೆಚ್ಚಿನ ಆದ್ಯತೆ ನೀಡಿ

24chn3
Published on

ಚಾಮರಾಜನಗರ: ರಾಷ್ಟ್ರೀಯ ಬ್ಯಾಂಕ್‌ಗಳಂತೆಯೇ ಸಹಕಾರ ಸಂಘಗಳು ಬಡಜನರಿಗೆ ಅನುಕೂಲ ಒದಗಿಸಿಕೊಡುತ್ತಿವೆ ಎಂದು ವನ್ಯ ಕರ್ನಾಟಕ ವಿವಿದೊದ್ದೇಶ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ಎಂ.ನಂಜುಂಡಸ್ವಾಮಿ ತಿಳಿಸಿದರು.

ನಗರದ ರೋಟರಿ ಭವನದಲ್ಲಿ ನವ್ಯ ಕರ್ನಾಟಕ ವಿವಿದೋದ್ದೇಶ ಸೌಹಾರ್ದ ಸಹಕಾರಿ ಸಂ ನಿಯಮಿತ ಶನಿವಾರ ಆಯೋಜಿಸಿದ್ದ ಸರ್ವ ಸದಸ್ಯರ ಸಭೆಯಲ್ಲಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಸಹಕಾರ ಸಂಘಗಳು ಉತ್ತಮ ಸೇವೆ ಸಲ್ಲಿಸುತ್ತಿವೆ. ಸಂಘಗಳು ಬೆಳೆಯಲು ಪದಾಧಿಕಾರಿಗಳ ಪಾತ್ರ ಮುಖ್ಯವಾದದ್ದು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಸಂಘದ ಅಭಿವೃದ್ಧಿಗೆ ಸಹಕರಿಸಿ ಎಂದು ಕೋರಿದರು.

ಬೆಂಗಳೂರಿನ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ ಜಿಲ್ಲಾ ಸಂಯೋಜಕ ಚಂದ್ರಶೇಖರಯ್ಯ ಮಾತನಾಡಿ, ಸಹಕಾರಿ ಸಂಗಳ ನಿಯಮಗಳನ್ನು ಸಂದ ಸದಸ್ಯರೆಲ್ಲರೂ ಪಾಲಿಸಬೇಕು. ಸಂ ಬೆಳೆಯಲು ಹೆಚ್ಚು ಷೇರುಗಳನ್ನು ಇಡಲು ಮುಂದಾಗಬೇಕು. ರಾಜ್ಯ ಸರ್ಕಾರದ ಅನುಮೋದನೆಯಂತೆ ಸಂದ ಚಟುವಟಿಕೆಗಳು ನಡೆಸಬೇಕು. ಹೆಣ್ಣು ಮಕ್ಕಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಹೇಳಿದರು.

ನಿರ್ದೇಶಕ ಪ್ರಭುಸ್ವಾಮಿ ಮಾತನಾಡಿದರು. ಉಪಾಧ್ಯಕ್ಷ ಎಸ್.ಮಂಜು, ನಿರ್ದೇಶಕರಾದ ಎಸ್.ಅರುಣ, ಎಸ್.ಪಿ. ಬಸವಣ್ಣ, ಎಚ್.ಎಂ. ಗುರುಸ್ವಾಮಿ, ಕರುಣಾಕರ, ಪ್ರಕಾಶ್, ವೀರಣ್ಣ, ಶಿವನಂಜಯ್ಯ, ರತ್ನಮ್ಮ, ಮಹೇಶ್ ಮತ್ತು ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net