

ಹನೂರು: ಬರದ ಕೃಪಾಕಟಾಕ್ಷಕ್ಕೆ ಭೂ ಮಾಲೀಕರೀಗ ಕೂಲಿಕಾರರಾಗಿ ಬದಲಾಗಿದ್ದಾರೆ. ಕೃಷಿ ಬಿಟ್ಟು ಗುಳೆ ಬೆಂಗಳೂರಿಗೆ ಗುಳೆ ಹೊರಟಿದ್ದಾರೆ.
ಕರ್ನಾಟಕ-ತಮಿಳುನಾಡು ಗಡಿಯಲ್ಲಿರುವ ಹನೂರು ತಾಲೂಕಿನ ಶಾಗ್ಯ ಗ್ರಾಮ ಸಂಪೂರ್ಣ ಮಳೆಯಾಶ್ರಿತ ಪ್ರದೇಶ. ವರುಣನ ಅವಕೃಪೆಯಿಂದಾಗಿ ಇಲ್ಲಿನ ಜಮೀನುಗಳೆಲ್ಲಾ ಪಾಳು ಬಿದ್ದಿದ್ದು, ಈ ಜಮೀನುಗಳ ಮಾಲೀಕರು ಬೋರ್‌ವೆಲ್ ಇರುವ ಜಮೀನುಗಳಿಗೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದಾರೆ. ಇನ್ನು ಕೆಲವರು ಕೃಷಿ ಬಿಟ್ಟು ಬೆಂಗಳೂರಿನಲ್ಲಿ ಕೆಲಸಕ್ಕೆ ಹೋಗಿದ್ದಾರೆ.
ಶಾಗ್ಯ ಭಾಗದಲ್ಲಿ ಗಾಣಿಗಮಂಗಲ, ಕಳ್ಳಿದೊಡ್ಡಿ, ಬೀರೂಟ, ಪುಷ್ಪಾಪುರ ಹಾಗೂ ಇನ್ನಿತರೆ ಗ್ರಾಮಗಳಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ರೈತರು ಮಳೆಯಾಶ್ರಿತ ಖುಷ್ಕಿ ಭೂಮಿಯಲ್ಲಿ ಕಷಿಯನ್ನು ಅವಲಂಬಿಸಿದ್ದಾರೆ. ಈ ಭಾಗದಲ್ಲಿ ಮುಖ್ಯವಾಗಿ ಮುಂಗಾರಿನಲ್ಲಿ ವರ್ಷಕ್ಕೆ ಒಂದು ಬೆಳೆಯಂತೆ ರಾಗಿ ಹಾಗೂ ಕಡಲೆಕಾಯಿಯನ್ನು ಬೆಳೆಯುತ್ತಿದ್ದರು. ಆದರೆ ಈ ಬಾರಿ ಮಳೆ ಸಂಪೂರ್ಣ ಕೈಕೊಟ್ಟ ಪರಿಣಾಮ ಬಹುತೇಕ ಜಮೀನುಗಳಲ್ಲಿ ಪೈರುಗಳು ಒಣಗಿವೆ. ಕೆಲವು ಜಮೀನುಗಳಲ್ಲಿ ಪೈರುಗಳೇ ಕಾಣಿಸಿಕೊಂಡಿಲ್ಲ. ಇದರಿಂದ ರೈತರು ನಷ್ಟವನ್ನು ಅನುಭವಿಸುವಂತಾಗಿರುವುದು ಒಂದೆಡೆಯಾದರೆ ಕೆಲವರು ಜಮೀನನ್ನು ಉಳುಮೆ ವಾಡಿಸಿ ಹಾಗೆಯೇ ಬಿಟ್ಟಿದ್ದಾರೆ. ಇನ್ನು ಕೆಲವರು ಜಮೀನನ್ನು ಪಾಳು ಬಿಟ್ಟು ಕೂಲಿಯನ್ನರಸಿ ಕುಟುಂಬ ಸಮೇತ ಗುಳೆ ಹೋಗಿದ್ದಾರೆ. ಇದರಿಂದ ಈ ಭಾಗದಲ್ಲಿ ರೈತನ ಬದುಕು ಮೂರಾಬಟ್ಟೆಯಾಗಿದ್ದು, ಜೀವನ ಸಾಗಿಸುವುದಕ್ಕೂ ಪಡುಬಾರದ ಕಷ್ಟ ಪಡುವಂತಾಗಿದೆ.
ಗುಳೆ ಹೊರಟಿರುವ ರೈತರು: ಶಾಗ್ಯ ಸಮೀಪದ ಕಳ್ಳಿದೊಡ್ಡಿ ಭಾಗದಲ್ಲಿ ರಾಗಿಯನ್ನು ಹೆಚ್ಚಾಗಿ ಬಿತ್ತನೆ ವಾಡಲಾಗಿದೆ. ಆದರೆ ಕಳೆದ ಒಂದು ತಿಂಗಳಿನಿಂದ ಮಳೆಬೀಳದ ಪರಿಣಾಮ ಪೈರುಗಳು ಸೊರಗುತ್ತಿವೆ. ಇದರಿಂದ ರೈತರನ್ನು ಚಿಂತೆಗೀಡು ವಾಡಿದ್ದು, ನಷ್ಟದ ಆತಂಕ ಮನೆ ವಾಡಿದೆ. ಇನ್ನು ಕೆಲವರು ಕಷಿ ವಾಡಲು ಸಾಧ್ಯವಾಗದೇ ಕುಟುಂಬ ಸಮೇತ ಕೂಲಿಯನ್ನರಿಸಿ ಬೆಂಗಳೂರು ಹಾಗೂ ಇನ್ನಿತರೆ ಕಡೆಗಳಿಗೆ ಗುಳೆ ಹೋಗಿದ್ದಾರೆ. ಇನ್ನು ಕೆಲವರು ಇದುವೆರಗೂ ಮಳೆಯನ್ನೇ ನಂಬಿ ಕುಳಿತ್ತಿದ್ದ ರೈತರು ಗುಳೆ ಹೋಗಲು ನಿರ್ಧರಿಸಿದ್ದಾರೆ. ಕೆಲವರು ಜಮೀನು ಇದ್ದರೂ ಬದುಕಿನ ಬಂಡಿಯನ್ನು ಸಾಗಿಸಲು ತಾಲೂಕಿನ ವಿವಿಧ ಗ್ರಾಮಗಳಲ್ಲಿನ ಪಂಪ್‌ಸೆಟ್ ಜಮೀನುಗಳಿಗೆ ಕೂಲಿ ಕೆಲಸಕ್ಕಾಗಿ ತೆರಳಬೇಕಾದ ಪರಿಸ್ಥಿತಿ ನಿರ್ವಾಣವಾಗಿದೆ. ಆದ್ದರಿಂದ ಸಂಪೂರ್ಣ ಬರ ಆವರಿಸಿದ್ದು, ಇದು ತಾಲೂಕಿಗೂ ಅನ್ವಯಿಸುತ್ತದೆ.
ಬೆಳೆ ಉಳಿಸಿಕೊಳ್ಳಲು ಕಸರತ್ತು:
ಕಳ್ಳಿದೊಡ್ಡಿ ಗ್ರಾಮದ ಮೂರ್ತಿ ಎಂಬವರು ಈಗಾಗಲೇ 3 ಎಕರೆಯಲ್ಲಿ ಬಿತ್ತನೆ ವಾಡಿದ್ದ ರಾಗಿ ಮಳೆಯಿಲ್ಲದೇ ಸಂಪೂರ್ಣ ನೆಲಕಚ್ಚಿದೆ. ಇನ್ನು 1 ಎಕರೆಯಲ್ಲಿ ಬಂದಿರುವ ಜೋಳದ ಪೈರನ್ನು ಹಸುಗಳ ಮೇವಿಗೋಸ್ಕರವಾದರೂ ಉಳಿಸಿಕೊಳ್ಳಲು ಔಷಧ ಸಿಂಪಡಣೆಗೆ ಬಿಂದಿಗೆಯಿಂದ ನೀರನ್ನು ಹೊತ್ತು ತಂದು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಮಳೆಯಿಲ್ಲದ ಪರಿಣಾಮ ಕಷಿಯೇ ನಂಬಿಕೊಂಡು ಜೀವನ ನಡೆಸುತ್ತಿರುವ ನಮ್ಮ ಕುಟುಂಬ ತುಂಬಾ ತೊಂದರೆ ಪಡಬೇಕಿದೆ ಎಂದು ರತ್ನಮ್ಮ ಸಮಸ್ಯೆ ಹೇಳಿಕೊಂಡರು.
4 ಎಕರೆ ಜಮೀನನ್ನು ಹೊಂದಿದ್ದು, ಕಳೆದ ಬಾರಿ ರಾಗಿಯನ್ನು ಬೆಳೆಯಲಾಗಿತ್ತು. ಆದರೆ ಈ ಬಾರಿ ಮಳೆಯಿಲ್ಲದ ಪರಿಣಾಮ ಜಮೀನನ್ನು ಪಾಳು ಬಿಡಬೇಕಾದ ಪರಿಸ್ಥಿತಿ ಬಂತು. ಹಾಗಾಗಿ ಜೀವನಾಧಾರಕ್ಕಾಗಿ ಕುಟುಂಬ ಸಮೇತ ಬೆಂಗಳೂರಿಗೆ ತೆರಳಿದ್ದು, ಖಾಸಗಿ ಕಂಪನಿಯಲ್ಲಿ ಕೆಲಸ ವಾಡುತ್ತಿದ್ದೇನೆ.-ಮಲ್ಲೇಶ್, ರೈತ ಕಳ್ಳಿದೊಡ್ಡಿ ಹನೂರು ತಾಲೂಕು. ಕಷಿಯನ್ನು ನಂಬಿ ಸಾವಿರಾರೂ ರೂ ಸಾಲ ವಾಡಿ 2 ಎಕರೆಯಲ್ಲಿ ರಾಗಿಯನ್ನು ಬಿತ್ತನೆ ವಾಡಿದ್ದೇನೆ. ಆದರೆ ಕಳೆದ ಒಂದು ತಿಂಗಳಿನಿಂದ ಮಳೆಯಿಲ್ಲದ ಕಾರಣ ಪೈರುಗಳೇ ಬಂದಿಲ್ಲ. ಇದರಿಂದ ನಷ್ಟವನ್ನು ಎದುರಿಸಬೇಕಾಗಿದ್ದು, ಚಿಂತೆ ವಾಡುವ ಪರಿಸ್ಥಿತಿ ಬಂದೊಂದಗಿದೆ. ಆದ್ದರಿಂದ ಸಾಲವನ್ನು ತೀರಿಸಲು ಕೂಲಿ ಕೆಲಸಕ್ಕಾಗಿ ಕುಟುಂಬ ಸಮೇತ ಕೇರಳಕ್ಕೆ ಹೋಗಲು ನಿರ್ಧರಿಸಿದ್ದೇನೆ.-ನಾರಾಯಣ, ರೈತ ಕಳ್ಳಿದೊಡ್ಡಿ ಗ್ರಾಮ