ವಿವಿಧ ಕೋರ್ಸ್‌ಗಳಿಗೆ ಪ್ರವೇಶಾತಿ ಪ್ರಾರಂಭ

Published on

ಚಾಮರಾಜನಗರ: ಮೈಸೂರಿನ ಕೇಂದ್ರೀಯ ಪೆಟ್ರೋ ಕೆಮಿಕಲ್ಸ್ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಶಿಕ್ಷಣ ಸಂಸ್ಥೆ, ಕೌಶಲ್ಯ ಮತ್ತು ತಾಂತ್ರಿಕ ತರಬೇತಿ ಕೇಂದ್ರ(ಸಿಪೆಟ್)ದಲ್ಲಿ 2023ನೇ ಸಾಲಿನ ಡಿಪಿಎಂಟಿ, ಡಿಪಿಟಿ ಕೋರ್ಸ್‌ಗಳಿಗೆ ಪ್ರವೇಶಾತಿ ಪ್ರಾರಂಭವಾಗಿದೆ ಎಂದು ಕೇಂದ್ರದ ಉಪನ್ಯಾಸಕ ಡಾ.ಮಧುಸೂದನ್ ಮಾಹಿತಿ ನೀಡಿದರು.

ಕೇಂದ್ರದಲ್ಲಿ ಡಿಪ್ಲೊಮೊ ಇನ್ ಪ್ಲಾಸ್ಟಿಕ್ ಮೌಲ್ಡ್ ಟೆಕ್ನಾಲಜಿ (ಡಿಪಿಎಂಟಿ) ಹಾಗೂ ಡಿಪ್ಲೊಮೊ ಇನ್ ಪ್ಲಾಸ್ಟಿಕ್ ಟೆಕ್ನಾಲಜಿ(ಡಿಪಿಟಿ) 3 ಕೋರ್ಸ್ ಗಳಿಗೆ ಪ್ರವೇಶ ಪ್ರಾರಂಭವಾಗಿದೆ. ಪ್ರವೇಶ ಬಯಸುವವರು ಎಸ್ಸೆಸ್ಸೆಲ್ಸಿ ಪಾಸ್ ಆಗಿರಬೇಕು. ಮೇ 28 ರಂದು ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಜೂನ್ 11 ರಂದು ಪ್ರವೇಶ ಪರೀಕ್ಷೆ ನಡೆಯಲಿದೆ. ಈ ಎರಡು ಕೋರ್ಸ್‌ಗಳಿಗೆ ಪಾಸ್ ಆದ ತಲಾ 60 ವಿದ್ಯಾರ್ಥಿಗಳನ್ನು ಅಡ್ಮಿಷನ್ ಮಾಡಿಕೊಳ್ಳಲಾಗುವುದು ಎಂದು ಗುರುವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪೋಸ್ಟ್ ಗ್ರಾಜುಯೇಟ್ ಡಿಪ್ಲೊಮಾ ಇನ್ ಪ್ಲಾಸ್ಟಿಕ್ ಪ್ರೊಸೆಸಿಂಗ್ ಅಂಡ್ ಟೆಸ್ಟಿಂಗ್(ಪಿಜಿಡಿ-ಪಿಪಿಟಿ) 3 ವರ್ಷದ ಕೋರ್ಸ್ ಸಹ ಇದ್ದು, ಈ ಕೋರ್ಸ್‌ಗೆ ಪ್ರವೇಶ ಬಯಸುವವರು ಬಿಎಸ್ಸಿ ಪದವಿ ಪಡೆದಿರಬೇಕು. 3 ವರ್ಷ ಕೋರ್ಸ್‌ನಲ್ಲಿ 6 ಸೆಮಿಸ್ಟರ್‌ಗಳಿದ್ದು, ಈ ಪೈಕಿ 5 ಸೆಮಿಸ್ಟರ್ ಪಠ್ಯ ಬೋಧನೆ ಇರುತ್ತದೆ. 6ನೇ ಸೆಮಿಸ್ಟರ್‌ನಲ್ಲಿ ಇಂಟರ್ನ್‌ಶಿಪ್ ಇರುತ್ತದೆ. ಅಲ್ಲದೇ ತರಬೇತಿ ಕೇಂದ್ರದಲ್ಲಿ ವಿದ್ಯಾರ್ಥಿವೇತನ, ಶೈಕ್ಷಣಿಕ ಸಾಲ ಸೌಲಭ್ಯ, ಹಾಸ್ಟೆಲ್ ವ್ಯವಸ್ಥೆ ಸಹ ಇರುತ್ತದೆ. ಆಸಕ್ತಿಯುಳ್ಳವರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು. ತರಬೇತಿ ವಿಭಾಗದ ಸಹಾಯಕ ರಾಚಯ್ಯ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net