ಗಾಂಧೀಜಿ ಕನಸನ್ನು ನನಸು ಮಾಡೋಣ

15chn16
Published on

ಚಾಮರಾಜನಗರ: ಗ್ರಾಮೀಣ ಪ್ರದೇಶಗಳಲ್ಲಿ ಸ್ವಚ್ಛತೆಯನ್ನು ಕಾಪಾಡುವ ಮೂಲಕ ಮಹಾತ್ಮ ಗಾಂಧೀಜಿ ಕನಸನ್ನು ನನಸು ಮಾಡೋಣ ಎಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ತಿಳಿಸಿದರು.

ತಾಲೂಕಿನ ಚಂದಕವಾಡಿ ಗ್ರಾಮ ಪಂಚಾಯಿತಿಯಲ್ಲಿ ಜಿಲ್ಲಾ ಪಂಚಾಯತಿ, ತಾಲೂಕು ಪಂಚಾಯಿತಿ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿರುವ ಸ್ವಚ್ಚತಾ ಹಿ ಸೇವಾ ಸ್ವಚ್ಚತೆಯೇ ಸೇವೆ ಎಂಬ ವಿಶೇಷ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದರು.

ಅ. 2 ರಂದು ಮಹಾತ್ಮ ಗಾಂಧೀಜಿ ಜನ್ಮದಿನದ ಸ್ಮರಣಾರ್ಥವಾಗಿ ಸ್ವಚ್ಚ ಭಾರತ ದಿನವನ್ನಾಗಿ ಆಚರಿಸಲಾಗುತ್ತಿದೆ. ಗಾಂಧೀಜಿಯರ ಕನಸನ್ನ ನನಸಾಗಿಸಲು ಈ ಜನಾಂದೋಲನವನ್ನು ಸರ್ಕಾರ ಅಯೋಜಿಸಿದೆ. ಹಂತಹಂತವಾಗಿ ಗ್ರಾಮಗಳ ಸ್ವಚ್ಚತೆ ಕಾಪಾಡಿಕೊಂಡ ಹೋಗಬೇಕಿದೆ. ಗ್ರಾಮಗಳಲ್ಲಿ ಸ್ವಚ್ಚತೆ ಕಾಪಾಡಬೇಕೆನ್ನುವ ಉದ್ದೇಶದಿಂದ ಸರ್ಕಾರ ಶೌಚಾಲಯ ನಿರ್ಮಾಣಕ್ಕೆ ಅನುದಾನ ಕೊಡುತ್ತಿದೆ. ಶೌಚಾಲಯ ನಿರ್ಮಿಸಿಕೊಂಡಿರುವಂತಹ ಫಲಾನುಭವಿಗಳು ಸರಿಯಾಗಿ ಬಳಕೆ ಮಾಡಿಕೊಳ್ಳಬೇಕು, ಎಲ್ಲೆಂದರಲ್ಲಿ ಕಸವನ್ನು ಹಾಕದೆ ಗ್ರಾಮಗಳ ಸ್ವಚ್ಚತೆಗೆ ಒತ್ತುನೀಡಬೇಕು ಎಂದರು.

ಕಾರ್ಯಕ್ರಮದಲ್ಲಿ ಜಿ.ಪಂ. ಯೋಜನಾಧಿಕಾರಿ ಕಿರಣ್‌ಪಡ್ಕೇಕರ್, ಸಹಾಯಕ ನಿರ್ದೇಶಕ ಪ್ರಕಾಶ್‌ಕುಮಾರ್, ಯೋಜನಾಧಿಕಾರಿ ನಂದೀಶ್, ಗ್ರಾ.ಪಂ.ಅಧ್ಯಕ್ಷ ನಟರಾಜು, ಉಪಾಧ್ಯಕ್ಷೆ ರಾಜೇಶ್ವರಿ, ತಾ.ಪಂ.ಇಓ ಪೂರ್ಣಿಮಾ, ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಎಂ. ಸಿದ್ದರಾಜು, ಕಾರ್ಯದರ್ಶಿ ಮಾದಪ್ಪ,ಲೆಕ್ಕ ಸಹಾಯಕ ರಾಜೇಶ್, ದೀಪಾರಮೇಶ್, ಎಸ್‌ಬಿಎಂ ಸಂಯೋಜಕ ಎಂ.ಮಹದೇವ್, ಜೊಸೇಫ್, ಎಚ್.ಆರ್.ಪುನೀತ್‌ಕುಮಾರ್ ಹಾಗೂ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net