5 ವರ್ಷಗಳ ಅವಧಿಯ ಒಡಂಬಡಿಕೆಗೆ ಸಹಿ

11chn3
Published on

ಚಾಮರಾಜನಗರ: ಬೋಧನೆ ಮತ್ತು ಕಲಿಕೆಯ ಪ್ರಗತಿಗಾಗಿ ಶೈಕ್ಷಣಿಕ ವಿನಿಮಯ ಹಾಗೂ ಸಹಕಾರವನ್ನು ಉತ್ತೇಜಿಸಲು ಚಾಮರಾಜನಗರ ವಿಶ್ವವಿದ್ಯಾನಿಲಯ, ್ರಾನ್ಸ್‌ನ ಯುರೋಪಿಯನ್ ಅಂತರಾಷ್ಟ್ರೀಯ ವಿಶ್ವವಿದ್ಯಾಲಯದ ಜತೆಗೆ 5 ವರ್ಷಗಳ ಅವಧಿಯ ಒಡಂಬಡಿಕೆಗೆ ಸಹಿ ಹಾಕಿದೆ.

ಚಾಮರಾಜನಗರ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಎಂ.ಆರ್.ಗಂಗಾಧರ್ ಹಾಗೂ ಯುರೋಪಿಯನ್ ಅಂತರಾಷ್ಟ್ರೀಯ ವಿಶ್ವವಿದ್ಯಾಲಯದ ನಿರ್ದೇಶಕಿ ತರ್ನ್ಟಿಪ್ ಕಾಂಗ್ಟೆವೆತ್ ಸೆ.8 ರಂದು ಒಡಂಬಡಿಕೆಗೆ ಸಹಿಹಾಕಿದ್ದು, ಅಧ್ಯಾಪಕರು, ಸಂಶೋಧಕರು ಮತ್ತು ವಿದ್ಯಾರ್ಥಿಗಳ ನಡುವಿನ ಶೈಕ್ಷಣಿಕ ಮತ್ತು ಸಂಶೋಧನಾ ಚಟುವಟಿಕೆಗಳ ವಿನಿಮಯ ಮಾಡಿಕೊಳ್ಳುವುದರ ಮೂಲಕ ಶೈಕ್ಷಣಿಕ ಸಹಕಾರವನ್ನು ಉತ್ತೇಜಿಸುವುದು ಮತ್ತು ಕಲಿಕೆಗಾಗಿ ಬೋಧನೆಗೆ ಅಧ್ಯಾಪಕರ ಪರಿಣಿತಿಯನ್ನು ಪರಸ್ಪರ ವಿನಿಮಯದ ಮೂಲಕ ಬೋಧನೆ ಮತ್ತು ಕಲಿಕೆಯ ಗುಣಮಟ್ಟವನ್ನು ಹೆಚ್ಚಿಸುವುದು ಈ ಒಡಂಬಡಿಕೆಯ ಮುಖ್ಯ ಉದ್ದೇಶವಾಗಿದೆ.

ಈ ಒಡಂಬಡಿಕೆ ಮೂಲಕ ವಿಶ್ವವಿದ್ಯಾಲಯದ ಅಧ್ಯಾಪಕರು, ಸಂಶೋಧಕರು ಮತ್ತು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಹೆಚ್ಚಿನ ಅವಕಾಶ ಸೀಗುವುದಲ್ಲದೆ, ವಿಶ್ವವಿದ್ಯಾನಿಲಯದ ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ವಿದೇಶದಲ್ಲಿ ವಿಶೇಷ ಕೋರ್ಸ್‌ಗಳನ್ನು ಯುರೋಪಿಯನ್ ಅಂತರಾಷ್ಟ್ರೀಯ ವಿಶ್ವವಿದ್ಯಾಲಯ ಅಡಿಯಲ್ಲಿ ಮಾಡಲು ಅವಕಾಶವಿದೆ ಎಂದು ಚಾಮರಾಜನಗರ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಎಂ.ಆರ್.ಗಂಗಾಧರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net