ಗಣಪತಿ ಪ್ರತಿಷ್ಠಾಪನೆಗೆ ಅನುಮತಿ ಕಡ್ಡಾಯ

10chn8
Published on

ಕೊಳ್ಳೇಗಾಲ : ಈ ಬಾರಿಯ ಗಣೇಶ ಹಬ್ಬದಲ್ಲಿ ಮಣ್ಣಿನ ಗಣಪತಿ ಬಿಟ್ಟು ಬೇರೆ ಯಾವ ರಾಸಾಯನಿಕ ಪದಾರ್ಥಗಳಿಂದ ಮಾಡಿದ್ದ ಗಣಪತಿಯನ್ನು ಕೂರಿಸಬಾರದು ಎಂದು ಪೊಲೀಸ್ ಇನ್ಸ್‌ಪೆಕ್ಟರ್ ಕೃಷ್ಣಪ್ಪ ಸಾರ್ವಜನಿಕರಿಗೆ ಮಾಹಿತಿ ನೀಡಿದರು.

ಪಟ್ಟಣದ ಗ್ರಾಮಾಂತರ ಪೊಲೀಸ್ ಠಾಣೆಯ ವ್ಯಾಪ್ತಿಗೆ ಬರುವ ಗ್ರಾಮಗಳಲ್ಲಿ ಗಣಪತಿ ಕೂರಿಸುವ ಸಂಘ ಸಂಸ್ಥೆಯವರಿಗೆ ಮಾರ್ಗದರ್ಶನ ನೀಡುವ ಸೌಹರ್ದತೆ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಬಡಾವಣೇಗಳಲ್ಲಿ ಗಣಪತಿ ಕೂರಿಸುವ ಮೊದಲು ಪೊಲೀಸ್ ಠಾಣೆಯ ಅನುಮತಿ ಪಡೆಯಬೇಕು. ಯಾವುದೇ ಕಾರಣಕ್ಕೂ ವಿದ್ಯುತ್ ಕಂಬದಿಂದ ನೇರವಾಗಿ ವಿದ್ಯುತ್ ಸಂಪರ್ಕ ಪಡೆಯಬಾರದು, ಪುಂಡರು ಹಾಗೂ ಕುಡುಕರ ಹಾವಳಿ ಬಾರದಂತೆ ವ್ಯವಸ್ಥಾಪಕ ಮಂಡಳಿಯವರು ನೋಡಿಕೊಳ್ಳಬೇಕು ಎಂದರು.

ಗಣಪತಿ ವಿಸರ್ಜಿಸುವ ಸಂಧರ್ಭದಲ್ಲಿ ಪೊಲೀಸರಿಗೆ ಮುಂಚಿತವಾಗಿ ತಿಳಿಸಬೇಕು. ಈ ನಿಯಮಗಳನ್ನು ಉಲ್ಲಂಘನೆ ಮಾಡಿದರೇ ಗಣಪತಿ ಕೂರಿಸುವ ಮಂಡಳಿಯವರ ಮೇಲೆ ಸೂಕ್ತ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಸೂಚನೆ ನೀಡಿದರು.

ಸಭೆಯಲ್ಲಿ ಟೌನ್ ಕ್ರೈಂ ಪಿಎಸ್‌ಐ ಉಮಾವತಿ, ಗ್ರಾಮಾಂತರ ಪಿಎಸ್‌ಐ ಗಣೇಶ್ ಹಾಗೂ ಸಿಬ್ಬಂದಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net