

ಚಾಮರಾಜನಗರ: ದೈನಂದಿನ ಚಟುವಟಿಕೆ ಪ್ರಾರಂಭಕ್ಕೂ ಮುನ್ನ ದೇವಸ್ಥಾನಗಳಿಗೆ ಭೇಟಿ ನೀಡುವ ಅಭ್ಯಾಸ ಬೆಳೆಸಿಕೊಳ್ಳಿ ಎಂದು ಶ್ರೀ ಹರಳುಕೋಟೆ ಜನಾರ್ಧನಸ್ವಾಮಿ ದೇವಸ್ಥಾನದ ಮುಖ್ಯ ಅರ್ಚಕ ಅನಂತ ಪ್ರಸಾದ್ ಹೇಳಿದರು.
ನಗರದ ರಾಮಸಮುದ್ರ ಬಡಾವಣೆಯ ಸಮೀಪದಲ್ಲಿರುವ ಇತಿಹಾಸ ಪ್ರಸಿದ್ಧ ಶ್ರೀ ಹರಳುಕೋಟೆ ಜನಾರ್ಧನಸ್ವಾಮಿ ದೇವಸ್ಥಾನದಲ್ಲಿ ಶ್ರೀ ವರಮಹಾಲಕ್ಷ್ಮಿ ಸಾಂಸ್ಕೃತಿಕ ಕ್ರೀಡಾ ಸೇವಾ ಸಂಸ್ಥೆ ವತಿಯಿಂದ ನಾಲ್ಕನೇ ಶ್ರಾವಣ ಶನಿವಾರದ ಅಂಗವಾಗಿ ಆಯೋಜಿಸಿದ್ದ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಪ್ರತಿಯೊಬ್ಬರು ಆಧ್ಯಾತ್ಮಿಕತೆಯನ್ನು ಅನುಸರಿಸುವುದರಿಂದ ಮನಸ್ಸಿಗೆ ನೆಮ್ಮದಿ ದೊರೆಯಲಿದೆ. ಈ ಮೂಲಕ ಸನ್ಮಾರ್ಗದಲ್ಲಿ ಸಾಗಬಹುದಾಗಿದೆ. ದಿನನಿತ್ಯ ನಮ್ಮ ದೈನಂದಿನ ಚಟುವಟಿಕೆ ಆರಂಭವಾಗಬೇಕಾದರೆ ದೇವರ ಸ್ಮರಣೆ ಜತೆಗೆ, ದೇವಸ್ಥಾನಗಳಿಗೆ ಭೇಟಿ ನೀಡುವ ಅಭ್ಯಾಸ ಬೆಳೆಸಿಕೊಳ್ಳಬೇಕು. ದೇವಾಲಯಗಳಿಗೆ ಭೇಟಿ ನೀಡುವುದರಿಂದ ಮನಸ್ಸು ಪ್ರಶಾಂತವಾಗಿರುತ್ತದೆ. ಇದರಿಂದ ನಮ್ಮ ಆರೋಗ್ಯವನ್ನು ಉತ್ತಮವಾಗಿ ಇಟ್ಟುಉಕೊಳ್ಳಬಹುದು ಎಂದು ತಿಳಿಸಿದರು.
ಶ್ರೀವರಮಹಾಲಕ್ಷ್ಮಿ ಸಾಂಸ್ಕೃತಿಕ ಕ್ರೀಡಾ ಸೇವಾ ಸಂಸ್ಥೆ ಅಧ್ಯಕ್ಷ ಜಿ.ಬಂಗಾರು, ಪತ್ರಕರ್ತ ಪುಟ್ಟಸ್ವಾಮಿ,
ನಾಗೇಶ್, ಕಪನಿನಾಯಕ, ರಾಮಸಮುದ್ರ ರಮೇಶ್, ಆಟೋ ರಂಗಸ್ವಾಮಿ, ಸಂಸ್ಥೆಯ ನಿರ್ದೇಶಕರಾದ ಶಿಲ್ಪ ಚೇತನ್, ಸಿಂಧು, ಮಾನಸ, ಜ್ಯೋತಿ, ಪ್ರಿಯಾ, ಅಮೂಲ್ಯ, ಸಂಧ್ಯಾ ಹಾಗೂ ಇತರರು ಭಾಗವಹಿಸಿದ್ದರು.