

ಕೊಳ್ಳೇಗಾಲ: ಪಟ್ಟಣದ ವಾಸವಿ ಮಹಲ್ ನಲ್ಲಿ ಸ್ವಯಂ ಸೇವಾ ಸಂಘದ ವತಿಯಿಂದ ಶುಕ್ರವಾರ ಅಮರಾಲಯ ಸೇವಾಧಾಮ ಲೋಕಾರ್ಪಣೆ ಕಾರ್ಯಕ್ರಮ ಶುಕ್ರವಾರ ನಡೆಯಿತು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸಹಾಸರ ಕಾರ್ಯವಾಹಕ, ಆರ್.ಎಸ್.ಎಸ್.ಪ್ರಚಾಕ ಮುಕುಂದ ಮಾತನಾಡಿ, ಶ್ರೀನಿವಾಸ್ ಗುಪ್ತ ಇಂದು ಒಂದು ಪುಣ್ಯದ ಕೆಲಸವನ್ನು ಮಾಡಿ ಅಮರಾಲಯ ಎಂಬ ಕಟ್ಟಡವನ್ನು ನಮ್ಮ ಆರ್.ಎಸ್.ಎಸ್ ಸಂಸ್ಥೆ ನಡೆಸುವ ಗ್ರಾಮೀಣ ಸಂಸ್ಕೃತಿ ಉಳಿವಿನ ಬಗ್ಗೆ ಮತ್ತು ನಮ್ಮ ಪೂರ್ವ ಕಾಲದಿಂದ ನಡೆದುಬಂದಿರುವ ಜನಸೇವೆಯನ್ನು ಮುಂದುವರಿಸಲು ಈ ಕಟ್ಟಡವನ್ನು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ವಸತಿ ಸೌಲಭ್ಯಗಳನ್ನು ಕಲ್ಪಸಿ ಮುಂದುವರೆಸಲಾಗುವುದು. ಇದೇ ಸಂಧರ್ಭದಲ್ಲಿ ಶ್ರೀನಿವಾಸ್‌ಗುಪ್ತರಂತಹ ಮನಸ್ಸು ಉಳ್ಳುವರು ಮುಂದೆ ಬಂಧರೆ ಸಮಾಜದ ಉದ್ದಾರ ಸಾಧ್ಯ ಎಂದರು.
ನಮ್ಮ ಸಂಘಟನೆಗಳು ದೇಶಾದ್ಯಂತ ಇಂತಹ ಹಲವಾರು ಪುಣ್ಯ ಕಾರ್ಯವನ್ನು ನಡೆಸಿಕೊಂಡು ಬರುತ್ತಿದೆ. ಹನೂರಿನಲ್ಲು ಸಹಾ ಹೆಣ್ಣು ಮಕ್ಕಳಿಗಾಗಿ ನಮ್ಮ ಸಂಘಟನೆಯು ಇಂತದೇ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದೆ. ಬೆಂಗಳೂರಿನಲ್ಲಿ ಸಾಧನಾ ಎಂಬ ಸಂಸ್ಥೆಯನ್ನು ತೆರದು ವಿದ್ಯಾರ್ಥಿಗಳಿಗೆ ಉತ್ತಮ ತರಬೇತಿ ಕೊಟ್ಟು ಉಚಿತ ಸಿಇಟಿ ಪರೀಕ್ಷೆಗಳಲ್ಲಿ ಉತ್ತಮ ಮಟ್ಟದ ಸಾಧನೆಗೈದು ಅನೇಕರು ಡಾಕ್ಟರ್, ಇಂಜಿನಿಯರ್ ಆಗಿದ್ದಾರೆ. ಈ ಎಲ್ಲಾ ಕೆಲಸಗಳನ್ನು ನಮ್ಮ ಸಂಘಟನೆಯವರು ಉಚಿತವಾಗಿ ಮಾಡುತ್ತಾ ಬರುತ್ತಿದೆ ಎಂದು ತಿಳಿಸಿದರು.
ಶ್ರೀನಿವಾಸ್ ಗುಪ್ತ ಬೆಲೆಬಾಳುವ ಕಟ್ಟಡವನ್ನು ನೀಡಿ ಸಮಾಜದ ಉದ್ದಾರಕ್ಕೆ ಕೊಡುಗೈದಾನಿಯಾಗಿರುವುದ್ದರಿಂದ ನಾನು ಈ ಸಂಧರ್ಭದಲ್ಲಿ ಅವರನ್ನು ಹಾಗೂ ಅವರ ಕುಟುಂಬವನ್ನು ಅಭಿನಂದಿಸುತ್ತೇನೆ ಎಂದು ತಿಳಿಸಿದರು.
ದಾನಿಗಳಾದ ಶ್ರೀನಿವಾಸ್ ಗುಪ್ತ ಮಾತನಾಡಿ, ನಾನು ಚಿಕ್ಕನಿಂದಲ್ಲೂ ಸಂಘ ಪರಿವಾರದ ಒಡನಾಟದಲ್ಲಿ ಇರುವುದ್ದರಿಂದ ನನಗೆ ಸಮಾಜಸೇವೆ ಮಾಡಬೇಕೆಂಬುವ ಗುಣ ಮೈಗೂಡಿ ಬಂದಿತ್ತು. ಇದರಿಂದ ನನಗೆ ಆತ್ಮ ತೃಪ್ತಿ ಉಂಟಾಗಿದೆ. ಮುಂದೇಯೂ ನಾನು ಸಮಾಜಸೇವೆಯನ್ನು ಮುಂದುವರೆಸಿಕೊಂಡು ಹೋಗುತ್ತೇನೆ ಎಂದು ತಿಳಿಸಿದರು.
ಕೇಂದ್ರೀಯ ಕ್ಷೇತ್ರ ಕಾರ್ಯವಾಹರು ತಿಪ್ಪೇಸ್ವಾಮಿ ಮಾತನಾಡಿ, ನಮ್ಮ ಸಂಘ ಪರಿವಾರ ಗ್ರಾಮಾಂತರ ಪ್ರದೇಶಗಳಲ್ಲಿ ಇಂತಹ ಸಮಾಜಸೇವಾ ಕೇಂದ್ರಗಳನ್ನು ಸ್ಥಾಪಿಸಿ ಸಮಾಜಕ್ಕೆ ಏನು ಬೇಕು ಏನು ಬೇಡ ಅನ್ನುವುದನ್ನು ಕಾರ್ಯಕರ್ತರಿಗೆ ತರಬೇತಿ ನೀಡಿ ಇಂತಹ ಕೇಂದ್ರಗಳು ಇಡೀ ರಾಜ್ಯ ಹಾಗೂ ರಾಷ್ಟ್ರಗಳಲ್ಲಿ ನಡೆಸಿಕೊಂಡು ಬರುತ್ತಿದೆ. ಶ್ರೀನಿವಾಸ್ ಗುಪ್ತರಂತಹ ದಾನಿಗಳು ಮುಂದೆ ಬಂದರೆ ಸಮಾಜಮುಖಿ ಕೆಲಸ ಮಾಡಲು ಸಾಧ್ಯ ಎಂದರು. ಶ್ರೀನಿವಾಸ್ ಗುಪ್ತ ಬೆಂಗಳೂರಿನಲ್ಲಿ ಚಿಂದಿ ಹಾಯುವ ಮಕ್ಕಳಿಗೆ ವಿದ್ಯಾಭ್ಯಾಸ ಕೊಡುವ ಸಂಸ್ಥೆಯನ್ನು ತೆರದು ಕಡು ಬಡವರಿಗೂ ವಿದ್ಯಾಭ್ಯಾಸ ಕೊಡುವ ಸಿರಿವಂತಿಕೆ ಇರುವ ಗುಪ್ತರವರ ಒಳ್ಳೇತನ ಸ್ಮರಿಸುವಂತಾಗಿದೆ. ಶ್ರೀನಿವಾಸ್ ಗುಪ್ತ ಸಮಾಜ ಸೇವೆ ಕೆಲಸಕ್ಕೆ ಸದಾ ಸಿದ್ಧರಾಗಿರುವುದ್ದರಿಂದ ಈ ಔದಾರ್ಯತೆ ಇತರರಿಗೆ ಬರಲಿ ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಮೈಸೂರು ವಿಭಾಗ ಸಂಘಚಾಲಕ ಡಾ. ಬಾಪಾಟ್ ಲೋಕಸೇವಾ ಪ್ರತಿಷ್ಟನಾ ಅಧ್ಯಕ್ಷ ಕೃ.ನರಹರಿ, ಮಾಜಿ ಶಾಸಕ ಎನ್.ಮಹೇಶ್, ಪರಿಮಳಾನಾಗಪ್ಪ, ಎಸ್.ಬಾಲರಾಜು, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಡಾ.ದತ್ತೇಶ್ ಕುಮಾರ್, ಡಾ.ಮೋಹನ್ ಸೇರಿದಂತೆ ಸೇವಾಸಂಸ್ಥೆಯ ಪದಾಧಿಕಾರಿಗಳು ಹಾಗೂ ಮುಖಂಡರು ಭಾಗವಹಿಸಿದ್ದರು.