

ಚಾಮರಾಜನಗರ: ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದಿಂದ ಗುಂಡ್ಲುಪೇಟೆ ಉಪವಿಭಾಗ ವ್ಯಾಪ್ತಿಯಲ್ಲಿ 2ನೇ ತ್ರೈಮಾಸಿಕ ನಿರ್ವಹಣೆ ಕಾಮಗಾರಿಯನ್ನು ಸೆ.10ರಂದು ಹಮ್ಮಿಕೊಂಡಿರುವುದರಿಂದ ಅಂದು ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆಯವರೆಗೆ ವಿವಿಧೆಡೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ಗುಂಡ್ಲುಪೇಟೆ, ಬರಗಿ, ಕೋಡಿಹಳ್ಳಿ, ಬೇರಂಬಾಡಿ, ನೆನೆಕಟ್ಟೆ, ವೀರನಪುರ ಮತ್ತು ಬೆಳವಾಡಿ, ಬಾಚಳ್ಳಿ, ಬೊಮ್ಮಲಾಪುರ, ದಾರಿಬೇಗೂರು, ಕೊಡಸೋಗೆ, ಹೆಗ್ಗವಾಡಿ, ಹಂಗಳ, ಶಿವಪುರ, ಕಲ್ಲಿಗೌಡನಹಳ್ಳಿ ಎನ್.ಜೆ.ವೈ, ಎಲಚಟ್ಟಿ, ಗೋಪಾಲ್‌ಪುರ ಎನ್.ಜೆ.ವೈ, ದೇವರಹಳ್ಳಿ, ಹೊನ್ನೇಗೌಡನಹಳ್ಳಿ, ಮಲ್ಲಯ್ಯನಪುರ ಹಾಗೂ ಹೊಂಗಹಳ್ಳಿ ಐಪಿ, ಮುಂಟಿಪುರ ಐಪಿ, ಹೆಚ್.ಎಸ್.ಹುಂಡಿ ಎನ್.ಜೆ.ವೈ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ಸಾರ್ವಜನಿಕರು ನಿಗಮದ ಜೊತೆ ಸಹಕರಿಸಬೇಕು. ವಿದ್ಯುತ್ ಸಂಬಂಧಿತ ದೂರು ಮತ್ತು ಸಹಾಯಕ್ಕಾಗಿ ಗ್ರಾಹಕರು ಉಚಿತ ದೂ.ಸಂ 1912 ಸಂಪರ್ಕಿಸುವಂತೆ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.