

ಚಾಮರಾಜನಗರ: ಕೊಳ್ಳೇಗಾಲ ತಾಲೂಕಿನ ಪರಿಶಿಷ್ಟ ವರ್ಗದ ನಿರುದ್ಯೋಗಿ ಯುವಕ, ಯುವತಿಯರಿಂದ 2023-24ನೇ ಸಾಲಿಗೆ ಲಘುವಾಹನ ತರಬೇತಿ, ಬ್ಯಾಗ್ ತಯಾರಿಕೆ, ಎಂಬ್ರೈಡಿಂಗ್, ವುಲ್ಲನ್, ಟೈಲರಿಂಗ್, ಗಂಧದಕಡ್ಡಿ ಮತ್ತು ಮೇಣದಭತ್ತಿ ತಯಾರಿಕೆ ಹಾಗೂ ಇತರೆ ತರಬೇತಿಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿದಾರರು ನಿರುದ್ಯೋಗಿಗಳಾಗಿರಬೇಕು. ಅಭ್ಯರ್ಥಿಯ ಕುಟುಂಬದ ಆದಾಯವು 2.50 ಲಕ್ಷರೂ. ಮೀರಿರಬಾರದು. ಯಾವುದೆ ವಿದ್ಯಾಸಂಸ್ಥೆಯಲ್ಲಿ ವ್ಯಾಸಂಗ ಅಥವಾ ತರಬೇತಿ ಪಡೆಯುತ್ತಿರಬಾರದು. ಅಭ್ಯರ್ಥಿಯ ಎರಡು ಭಾವಚಿತ್ರ ಲಗತ್ತಿಸಬೇಕು. ಲಘು ವಾಹನ ತರಬೇತಿಗೆ ಕನಿಷ್ಟ 7ನೇ ತರಗತಿ ಉತ್ತೀರ್ಣರಾಗಿರಬೇಕು. 18 ರಿಂದ 40ರ ವಯೋಮಿತಿ ಒಳಗಿರಬೇಕು. (40 ವರ್ಷ ವಯೋಮಿತಿ ಮೀರುತ್ತಿರುವವರಿಗೆ ಮೊದಲ ಆದ್ಯತೆ ನೀಡಲಾಗುವುದು).
ಅಭ್ಯರ್ಥಿಯು ಜಾತಿ ಪ್ರಮಾಣ ಪತ್ರವನ್ನು ಲಗತ್ತಿಸಿರಬೇಕು. ಎಲ್ಲಾ ಜೆರಾಕ್ಸ್ ಪ್ರತಿಗಳಿಗೆ ಗೆಜೆಟೆಡ್ ಅಧಿಕಾರಿಗಳಿಂದ ದೃಢೀಕರಿಸಿ ಸಲ್ಲಿಸಬೇಕು. ವೈದ್ಯಕೀಯ ಪ್ರಮಾಣ ಪತ್ರ ಲಗತ್ತಿಸಬೇಕು. ಅಭ್ಯರ್ಥಿಯ ಆಯ್ಕೆಯು ಸಾರಿಗೆ ಇಲಾಖೆಯ ನಿಯಮಕ್ಕೆ ಒಳಪಟ್ಟಿರುತ್ತದೆ. ಬುಟ್ಟಿ ತಯಾರಿಕೆ ತರಬೇತಿಗೆ 21 ರಿಂದ 40ರ ವಯೋಮಿತಿ ಒಳಗಿರಬೇಕು. (40 ವರ್ಷ ವಯೋಮಿತಿ ಮೀರುತ್ತಿರುವವರಿಗೆ ಮೊದಲ ಆದ್ಯತೆ ನೀಡಲಾಗುವುದು). ಅಭ್ಯರ್ಥಿಯು ಜಾತಿ ಪ್ರಮಾಣ ಪತ್ರ ಲಗತ್ತಿಸಿರಬೇಕು. ಎಲ್ಲಾ ಜೆರಾಕ್ಸ್ ಪ್ರತಿಗಳಿಗೆ ಗೆಜೇಟೆಡ್ ಅಧಿಕಾರಿಗಳಿಂದ ದೃಢೀಕರಿಸಿ ಸಲ್ಲಿಸಬೇಕು.
ಎಂಬ್ರೈಡಿಂಗ್, ವುಲ್ಲನ್ ತರಬೇತಿಗೆ ಅಭ್ಯರ್ಥಿಯು 21 ರಿಂದ 40ರ ವಯೋಮಿತಿಒಳಗಿರಬೇಕು. ಗಂಧದಕಡ್ಡಿ , ಮೇಣದಬತ್ತಿ ತಯಾರಿಕೆ ಹಾಗೂ ಟೈಲರಿಂಗ್ ತರಬೇತಿಗೆ 18 ರಿಂದ 40ರ ವಯೋಮಿತಿ ಒಳಗಿರಬೇಕು ನಿಗದಿತ ಅರ್ಜಿ ನಮೂನೆಯನ್ನು ಕೊಳ್ಳೇಗಾಲದ ಶ್ರೀಮಹದೇಶ್ವರ ಕಾಲೇಜು ಹಿಂಭಾಗದಲ್ಲಿರುವ ಸರ್ಕಾರಿ ಬುಡಕಟ್ಟು ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯ ಮುಂಭಾಗದಲ್ಲಿರುವ ಕೊಳ್ಳೇಗಾಲ ತಾಲ್ಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಕಚೇರಿಯಿಂದ ಪಡೆದು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಸೆ. 16ರೊಳಗೆ ಸಲ್ಲಿಸಬೇಕು. ಒಬ್ಬ ಅಭ್ಯರ್ಥಿಯು ಒಂದು ತರಬೇತಿಗೆ ಮಾತ್ರ ಅರ್ಜಿ ಸಲ್ಲಿಸಬೇಕು ಎಂದು ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.