

ಚಾಮರಾಜನಗರ: ಲೋಕ ಕಲ್ಯಾಣಾರ್ಥಕ್ಕಾಗಿ ಶ್ರಾವಣ ನವಮಿ ಅಂಗವಾಗಿ ಗ್ರಾಮದೇವತೆ ಶ್ರೀಮುದುಕು ಮಾರಮ್ಮ ದೇವಾಲಯದಲ್ಲಿ ಶುಕ್ರವಾರ ಗಣಪತಿ ಹೋಮ, ಚಂಡಿಕಾ ಹೋಮ ನೆರವೇರಿತು.
ನಗರದ ಹಳೆಯ ಬಸ್ ನಿಲ್ದಾಣದಲ್ಲಿರುವ ಗ್ರಾಮದೇವತೆ ಶ್ರೀಮುದುಕು ಮಾರಮ್ಮ ದೇವಾಲಯದಲ್ಲಿ ಮುಂಜಾನೆಯೇ ದೇವಸ್ಥಾನವನ್ನು ವಿವಿಧ ಪುಷ್ಷಗಳಿಂದ ಅಲಂಕರಿಸಲಾಗಿತ್ತು.
ಬೆಳಿಗ್ಗೆ 6 ಗಂಟೆಗೆ ವಿವಿಧ ಪೂಜಾ ಕೈಕಂಕರ್ಯಗಳು ಪ್ರಾರಂಭವಾಗಿ ದೇವತಾ ಅನುಜ್ಞಾ ಗೋಪೂಜೆ, ಗಣಪತಿಪೂಜೆ, ಹೋಮ, ಚಂಡಿಕಾಹೋಮ, ಪೂಜ್ಯಾಹ, ದೇವಾನಾಂದಿ, ಕಳಸಸ್ಥಾಪನೆ, ಸೂಕ್ತ ಪಾರಾಯಣ, ಮಾರಮ್ಮ ತಾಯಿಗೆ ಪಂಚಾಮೃತ ಅಭಿಷೇಕ, ಪೂರ್ಣಾವತಿ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತಾಧಿಗಳು ಭಾಗವಹಿಸಿ ದೇವರದರ್ಶನ ಪಡೆದರು. ಮಧ್ಯಾಹ್ನ 1 ಗಂಟೆಗೆ ಮಹಾಮಂಗಳಾರತಿ ನಡೆದು ನಂತರ ಪ್ರಸಾದ ವಿನಿಯೋಗಿಸಲಾಯಿತು.