

ಕೊಳ್ಳೇಗಾಲ: ಚಿತ್ರನಟ ಉಪೇಂದ್ರನನ್ನು ಬಂಧಿಸುವಂತೆ ಆದಿ ದ್ರಾವಿಡ ಮೂಲನಿವಾಸಿಗಳ ಹೋರಾಟ ಸಮಿತಿ ಸದಸ್ಯರು ನಡೆಸುತ್ತಿರುವ 14 ನೇ ದಿನದ ಪ್ರತಿಭಟನೆಯಲ್ಲಿ ಹಳೇ ಅಣಗಳ್ಳಿ ಗ್ರಾಮದವರು ಬೆಂಬಲ ಸೂಚಿಸಿ ಪ್ರತಿಭಟನೆ ನಡೆಸಿದರು.
ಪಟ್ಟಣದ ತಾಲೂಕು ಕಚೇರಿಯ ಮುಂಭಾಗದಲ್ಲಿ ಉಪೇಂದ್ರನ ವಿರುದ್ಧ ಧಿಕ್ಕಾರ ಕೂಗುವ ಮೂಲಕ ಪ್ರತಿಭಟಿಸಿದರು. ಪ್ರತಿಭಟನೆಗೆ ಬೆಂಬಲ ಸೂಚಿಸಿ ಹಿರಿಯ ವಕೀಲ ಕಾಮಗೆರೆ ಬಸವರಾಜು ಮಾತನಾಡಿ, ನಾವು ಭಾರತೀಯರಾಗಿ ಡಾ.ಅಂಬೇಡ್ಕರ್ ಬರೆದಂತಹ ಸಂವಿಧಾನದ ಆಶಯದಡಿಯಲ್ಲಿ ಜೀವನ ನಡೆಸುತ್ತೀದ್ದೇವೆ. ಉಪೇಂದ್ರ ಯಾವುದೇ ಒಂದು ವರ್ಗವನ್ನು ಟಾರ್ಗೆಟ್ ಮಾಡಿಕೊಂಡು ಅವಹೇಳನಕಾರಿ ಹೇಳಿಕೆಯನ್ನು ನೀಡಿರುವುದನ್ನು ನಾವೆಲ್ಲ ಖಂಡಿಸುತ್ತೇವೆ. ಉಪೇಂದ್ರನನ್ನು ಬಂಧಿಸುವರೆಗೂ ಪ್ರತಿಭಟನೆಯನ್ನು ನಡೆಸುವುದಾಗಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಯಜಮಾನರಾದ ಸಂಜೀವಯ್ಯ, ಸಿದ್ದರಾಜು, ಜೋಗಿ ಸಿದ್ದಯ್ಯ, ಮುಖಂಡರು ಶಂಕರ್, ಚೇತನ್ ಪ್ರಭು, ರಾಕೇಶ್, ಗಿರೀಶ್. ಪಿ, ಸಮಿತಿಯ ಸಂಚಾಲಕರು ಚಾಮರಾಜು, ರಾಜಪ್ಪ, ಅಣಗಳ್ಳಿ ಬಸವರಾಜು, ಜೈರಾಜು ಸತ್ತೇಗಾಲ, ಮಲ್ಲರಾಜು, ಮಹಾಲಿಂಗಯ್ಯ, ಕೆಂಪರಾಜು, ಲಿಂಗಯ್ಯ ಕುಂತೂರು ಮತ್ತು ಇತರರು ಇದ್ದರು.