ಕಾದಾಟದಲ್ಲಿ ಆನೆ ಸಾವು

6kiran2
Published on

ಕೊಳ್ಳೇಗಾಲ: ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ ಎರಡು ಗಂಡಾನೆಗಳ ನಡುವಿನ ಕಾದಾಟದಲ್ಲಿ ಒಂದು ಆನೆ ಮೃತಪಟ್ಟಿದೆ.

ಜಾಗೇರಿಯ ದೊಡ್ಡಮಾಕಳಿ ಬೀಟ್‌ನಲ್ಲಿ ಮಂಗಳವಾರ ರಾತ್ರಿ 15 ರಿಂದ 20 ವರ್ಷದ ಆನೆ ಮೃತಪಟ್ಟಿದೆ. ಕಾದಾಟದಲ್ಲಿ ಮತ್ತೊಂದು ಆನೆಗೆ ಗಾಯಗಳಾಗಿವೆ ಎಂದು ಡಿಎ್ಒ ಸಂತೋಷ್‌ಕುಮಾರ್ ತಿಳಿಸಿದ್ದಾರೆ. ಆನೆ ಕಳೇಬರದ ಮರಣೋತ್ತರ ಪರೀಕ್ಷೆಯನ್ನು ಪಶು ವೈದ್ಯ ಡಾ.ಶಿವಕುಮಾರ್ ನಡೆಸಿದರು. ಆನೆಯ ಎರಡು ದಂತಗಳನ್ನು ಸುರಕ್ಷಿತವಾಗಿ ತೆಗೆದಿಡಲಾಗಿದೆ. ಶವ ಪರೀಕ್ಷೆ ನಂತರ ಸ್ಥಳದಲ್ಲೇ ಹಳ್ಳ ತೋಡಿ ಹೂಳಲಾಯಿತು. ಸ್ಥಳಕ್ಕೆ ಎಸಿಎ್ ಶಶಿಧರ್, ಆರ್‌ಎ್ಒ ಭರತ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net