ಕಾವೇರಿ ವನ್ಯಜೀವಿ ಧಾಮದಲ್ಲಿ ಬಿಳಿ ಬಣ್ಣದ ಕಡವೆ ಪತ್ತೆ

SPARTAN
SPARTAN
Published on

ಚಾಮರಾಜನಗರ: ಕಾವೇರಿ ವನ್ಯಜೀವಿ ಧಾಮ ವಲಯದಲ್ಲಿ ಅಪರೂಪದ ಬಿಳಿ ಬಣ್ಣದ ಕಡವೆ ಪತ್ತೆಯಾಗಿದೆ.

ಡಾ.ಸಂಜಯ್ ಗುಬ್ಬಿ ಮತ್ತು ತಂಡ ಕಾವೇರಿ ವನ್ಯಜೀವಿ ಧಾಮದಲ್ಲಿ ಚಿರತೆಗಳ ಬಗ್ಗೆ ಅಧ್ಯಯನ ನಡೆಸಲು ಅಳವಡಿಸಿದ್ದ ಕ್ಯಾಮರಾ ಟ್ರಾಪ್‌ನಲ್ಲಿ ಬಿಳಿ ಬಣ್ಣದ (ಲ್ಯೂಸಿಸ್ಟಿಕ್) ಕಡವೆ ಚಿತ್ರ ಸೆರೆಯಾಗಿದೆ. ಬಿಳಿ ಬಣ್ಣದ ಹೆಣ್ಣು ಕಡವೆ ಇದಾಗಿದ್ದು, ಇನ್ನೊಂದು ವಯಸ್ಕ ಹೆಣ್ಣು ಕಡವೆಯೊಂದಿಗೆ ಕಂಡುಬಂದಿದೆ. ಆದ್ದರಿಂದ ಇದು ತನ್ನ ತಾಯಿಯೊಂದಿಗಿರುವ ಚಿಕ್ಕ ವಯಸ್ಸಿನ ಕಡವೆ ಎಂದು ಊಹಿಸಲಾಗಿದೆ.

ಈ ಅರಣ್ಯ ಪ್ರದೇಶದಲ್ಲಿ ಇದೇ ಮೊದಲ ಬಾರಿಗೆ ಬಿಳಿ ಬಣ್ಣದ ಕಡವೆಯನ್ನು ಛಾಯಾಚಿತ್ರದ ಮೂಲಕ ದಾಖಲಿಸಲಾಗಿದೆ. ಈ ಹಿಂದೆ 2014ರಲ್ಲಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬಿಳಿ ಬಣ್ಣದ ಕಡವೆಯೊಂದು ದಾಖಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net