

ಯಳಂದೂರು: ತಾಲೂಕಿನ ಹೊನ್ನೂರು ಗ್ರಾಮದಲ್ಲಿ ರವಿಕುಮಾರ್ ಎಂಬುವವರ ತೋಟದ ತೆರೆದ ಬಾವಿಗೆ ಬಿದ್ದಿದ್ದ ನವಿಲನ್ನು ಬುಧವಾರ ಅರಣ್ಯ ಇಲಾಖೆ ಅಧಿಕಾರಿಗಳು ರಕ್ಷಿಸಿದರು.
ಕಳೆದ ಎರಡು ದಿನಗಳ ಹಿಂದೆ ತೆರೆದ ಬಾವಿಗೆ ನವಿಲು ನಿಯಂತ್ರಣ ತಪ್ಪಿ ಬಿದ್ದಿತ್ತು. ಈ ಬಗ್ಗೆ ಯಾರಿಗೂ ಗೊತ್ತಿರಲಿಲ್ಲ. ತೋಟದ ಬಾವಿ ಬಳಿ ಬುಧವಾರ ಹೋಗಿದ್ದ ರವಿಕುಮಾರ್ ಅವರು ನವಿಲು ಬಾವಿಗೆ ಬಿದ್ದಿರುವುದನ್ನು ಕಂಡು ತಕ್ಷಣ ಯಳಂದೂರು ವನ್ಯಜೀವಿ ವಿಭಾಗದ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.
ತಕ್ಷಣ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ 30 ಅಡಿ ಅಳವಿದ್ದ ತೆರೆದ ಬಾವಿಯನ್ನು ಹಗ್ಗದ ಸಹಾಯದ ಮೂಲಕ ಇಳಿದು ನವಿಲನ್ನು ರಕ್ಷಿಸಿ ಬಿಆರ್‌ಟಿ ಅರಣ್ಯ ಪ್ರದೇಶಕ್ಕೆ ಬಿಟ್ಟರು.