

ಚಾಮರಾಜನಗರ: ಬಹುಜನ ಸಮಾಜ ಪಕ್ಷದ ಚಾಮರಾಜನಗರ ವಿಧಾನಸಭಾ ಕ್ಷೇತ್ರದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ನಗರದ ಪ್ರವಾಸಿ ಮಂದಿರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಬಹುಜನ ಸಮಾಜ ಪಕ್ಷದ ಜಿಲ್ಲಾ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ರಾಜ್ಯ ಮಟ್ಟದ ಮುಖಂಡರ ನೇತೃತ್ವದಲ್ಲಿ ತಾಲೂಕು ಪದಾಧಿಕಾರಿಗಳನ್ನು ಆಯ್ಕೆಮಾಡಲಾಯಿತು.
ಸಂಯೋಜಕರಾಗಿ ವಡ್ಡರಹಳ್ಳಿ ಸಿದ್ದೇಶ್, ಉಸ್ತುವಾರಿ ಶಿವಶಂಕರ್ ಜ್ಯೋತಿಗೌಡನಪುರ, ಅಧ್ಯಕ್ಷರಾಗಿ ಎಸ್.ಪಿ.ಮಹೇಶ್, ಉಪಾಧ್ಯಕ್ಷ ಗಗನ್ ಚಂದರ್, ಶಿವಪುರ ಮಹೇಶ್, ಪ್ರಧಾನ ಕಾರ್ಯದರ್ಶಿ ಹೊಸಳ್ಳಿ ಸಿದ್ದರಾಜು, ಖಜಾಂಚಿ ದೊಡ್ಡರಾಯಪೇಟೆ ಕೃಷ್ಣಮೂರ್ತಿ, ಟೌನ್ ಅಧ್ಯಕರಾಗಿ ಗಾಳೀಪುರ ರಂಗಸ್ವಾಮಿ ಅವರನ್ನು ಆಯ್ಕೆಮಾಡಲಾಯಿತು.