

ಯಳಂದೂರು: ಪಟ್ಟಣದ ನ್ಯಾಯಾಲಯದ ಕಟ್ಟಡದ ಹಿಂಭಾಗಕ್ಕೆ ಬಂದಿದ್ದ ಹಾವನ್ನು ಉರಗ ತಜ್ಞ ಸಂತೆಮರಹಳ್ಳಿ ಸ್ನೇಕ್ ಮಂಜು ರಕ್ಷಿಸಿ ಅರಣ್ಯಕ್ಕೆ ಬಿಟ್ಟಿದ್ದಾರೆ.
ಸೋಮವಾರ ಮಧ್ಯಾಹ್ನ ನ್ಯಾಯಾಲಯದ ಕಟ್ಟಡದ ಹಿಂಭಾಗದ ಸಭಾಂಗಣದಲ್ಲಿ ಕೇರೆ ಹಾವು ಕಾಣಿಸಿಕೊಂಡಿದೆ. ಈ ಬಗ್ಗೆ ಕೂಡಲೇ ಇಲ್ಲಿನ ಸಿಬ್ಬಂದಿ ಸ್ನೇಕ್ ಮಂಜು ಅವರಿಗೆ ಕರೆ ಮಾಡಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಮಂಜು 5 ಅಡಿ ಉದ್ದ ಇದ್ದ ಹಾವನ್ನು ಸುರಕ್ಷಿತವಾಗಿ ಹಿಡಿದು ಸಮೀಪದ ಬಿಆರ್‌ಟಿ ಹುಲಿ ರಕ್ಷಿತ ಅರಣ್ಯಕ್ಕೆ ಬಿಟ್ಟಿದ್ದಾರೆ.