ಶಿಕ್ಷಕರ ಮಹತ್ವ ಸಾರಿದ ಸಾವಿತ್ರಿಬಾಪುಲೇ

05chn0
Published on

ಚಾಮರಾಜನಗರ: ಶಿಕ್ಷಕರ ಸೇವೆ ಅಮೂಲ್ಯವಾದುದು, ವಿದ್ಯಾರ್ಥಿಯ ಜೀವನ ಉತ್ತಮವಾಗಲು ಶಿಕ್ಷಕರ ಪಾತ್ರ ಬಹಳ ಮುಖ್ಯ, ಶಿಕ್ಷಕ ವಿದ್ಯಾರ್ಥಿಯ ಬದುಕಿನ ದಾರಿದೀಪ ಎಂದು ಶ್ರೀರಾಮಚಂದ್ರ ವಿದ್ಯಾಸಂಸ್ಥೆಯ ಅಧ್ಯಕ್ಷ ಎಂ.ಎಸ್.ಮಾದಯ್ಯ ತಿಳಿಸಿದರು.

ನಗರದ ನ್ಯಾಯಾಲಯ ರಸ್ತೆಯಲ್ಲಿ ಶ್ರೀರಾಮಚಂದ್ರ ವಿದ್ಯಾಸಂಸ್ಥೆಯಲ್ಲಿ ಮಂಗಳವಾರ ಆಯೋಜಿಸಿದ್ದ ಶಿಕ್ಷಕರ ದಿನಚರಣೆ ಕಾರ್ಯಕ್ರಮದಲ್ಲಿ ಡಾ.ಸರ್ವಪಲ್ಲಿ ರಾಧಕೃಷ್ಣ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು.

ದೇಶದ ಅಭಿವೃದ್ದಿಗೆ ಶಿಕ್ಷಣ ಬಹಳ ಮುಖ್ಯ, ಪ್ರತಿಯೊಬ್ಬರು ಶಿಕ್ಷಣವನ್ನು ಪಡೆಯಬೇಕು ಎಂಬುದು ಡಾ. ಬಿ.ಆರ್.ಅಂಬೇಡ್ಕರ್ ಅವರ ಆಶಯವಾಗಿತ್ತು. ಅದರಂತೆಯೇ ಡಾ. ಸರ್ವಪಲ್ಲಿ ರಾಧಕೃಷ್ಣ ಅವರು ಶಿಕ್ಷಣಕ್ಕೆ ಹೆಚ್ಚು ಮಹತ್ವವನ್ನು ನೀಡಿದರು. ಸರ್ವಪಲ್ಲಿ ರಾಧಕೃಷ್ಣ ರವರಿಗೆ ಪ್ರತಿಯೊಬ್ಬ ಶಿಕ್ಷಕರು ಗುರುವಿನ ಸ್ಥಾನವನ್ನು ನೀಡಿದ್ದಾರೆ. ಅವರ ಜನ್ಮದಿನವನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಣೆ ಮಾಡುತ್ತಾರೆ ಎಂದು ಹೇಳಿದರು.

ಸಂಸ್ಥೆಯ ಕಾರ್ಯದರ್ಶಿ ಎಂ.ರುದ್ರಮೂರ್ತಿ ಮಾತನಾಡಿ, ಶಿಕ್ಷಣದ ಮಹತ್ವವನ್ನು ತಿಳಿಸಿಕೊಟ್ಟವರಲ್ಲಿ ಸಾವಿತ್ರಿ ಬಾಪುಲೇ ನಮ್ಮ ದೇಶದ ಮೊದಲ ಶಿಕ್ಷಕಿ ವಿದ್ಯೆಯು ಪ್ರತಿಯೊಬ್ಬರ ಹಕ್ಕು ಎಂದು ತೋರಿಸಿದರು. ಶಿಕ್ಷಣ ದಿಂದ ವಂಚಿತರಾದವರಿಗೆ ಶಿಕ್ಷಣ ನೀಡಿದ ಮೊದಲಗುರು ಮಹಿಳಾ ಶಿಕ್ಷಕಿ ಸಾವಿತ್ರಿ ಬಾಪುಲೇ ಎಂದರು.

ಸಂಸ್ಥೆಯ ಸದಸ್ಯ ಬಿ.ಮಹದೇವಯ್ಯ, ಶ್ರೀರಾಮಚಂದ್ರ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ರತ್ನಮ್ಮ, ದೈಹಿಕ ಶಿಕ್ಷಣ ಶಿಕ್ಷಕ ರಂಗಸ್ವಾಮಿ, ಶಿಕ್ಷಕರಾದ ವೀರಣ್ಣ, ನಾಗರಾಜು, ಮಹೇಶ್, ಯಶ್‌ಪಾಲ್ ಮತ್ತು ಮಂಜುಳಾ, ಪರಶಿವಮೂರ್ತಿ ಇತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net