ಸಾರನಾಥ ಬೌದ್ಧ ವಿಹಾರಕ್ಕೆ ಟಿಬೆಟ್ ಸಂಸದರ

19raju1
Published on

ಚಾಮರಾಜನಗರ: ನಗರದ ಕರಿನಂಜನಪುರ ರಸ್ತೆಯಲ್ಲಿರುವ ಸಾರನಾಥ ಬೌದ್ಧವಿಹಾರ ಹಾಗೂ ದೀಪಾಂಕರ ಬೌದ್ಧ ವಿಹಾರಕ್ಕೆ ಟಿಬೆಟ್ ಸಂಸದ ಹಾಗೂ ಮಹಾ ಉಪಾಸಕರಾದ ದಾವಟಿಸ್ಸಿ ಹಾಗೂ ಯಸ್ಸಿ ಡೋಮ್ಲಿ ಸೌಹಾರ್ದಯುತವಾಗಿ ಭೇಟಿ ನೀಡಿದ್ದರು.

ಹನೂರು ತಾಲೂಕಿನ ಒಡೆಯರಪಾಳ್ಯ ಗ್ರಾಮದ ಬೌದ್ಧ ವಿಹಾರದಲ್ಲಿ ಸುಮಾರು 5 ಕೋಟಿ ರೂ. ವೆಚ್ಚದಲ್ಲಿ 113 ಅಡಿ ಎತ್ತರದ ಬುದ್ಧರ ಪ್ರತಿಮೆ ನಿರ್ಮಾಣವಾಗುತ್ತಿದ್ದು, ಈ ಕುರಿತು ನಗರದ ಬೌದ್ಧ ಉಪಾಸಕರ ಜತೆ ಚರ್ಚಿಸುವ ಸಲುವಾಗಿ ಆಗಮಿಸಿದ್ದರು. ಈ ವೇಳೆ ದೀಪಾಂಕರ ಬೌದ್ಧ ವಿಹಾರಕ್ಕೂ ಭೇಟಿ ನೀಡಿ, ನಗರಸಭೆ ಮಾಜಿ ಅಧ್ಯಕ್ಷ ನಂಜುಂಡಸ್ವಾಮಿ ಜತೆ ಚರ್ಚೆ ನಡೆಸಿದರು. ಟಿಬೆಟಿಯನ್ ಬೌದ್ಧ ಆರ್ಗನೈಸೇಷನ್ ರಾಯಭಾರಿ ಆಗಿರುವ ದಾವಟಿಸ್ಸಿ ಹಾಗೂ ಯಸ್ಸಿ ಡೋಮ್ಲಿ ಅವರನ್ನು ನಗರದ ಬೌದ್ಧ ಉಪಾಸಕರು ಸನ್ಮಾನಿಸಿದರು.

ಒಡೆಯರಪಾಳ್ಯ ಟಿಬೆಟ್ ಬೌದ್ಧ ವಿಹಾರದ ಆಡಳಿತಾಧಿಕಾರಿ ಗೆಲಕ್, ಮನೋ ರಖ್ಖಿತ ಭಂತೇಜಿ, ಭಾರತೀಯ ಬೌದ್ಧ ಮಹಾಸಭಾದ ಜಿಲ್ಲಾಧ್ಯಕ್ಷ ಬಸವರಾಜು, ಮುಖಂಡ ಮಹೇಶ್ ಕುದರ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net