ಜಿಲ್ಲೆಯ 15 ಜನ ಶಿಕ್ಷಕರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ

04chn12
Published on

ಚಾಮರಾಜನಗರ: ಶಾಲಾ ಶಿಕ್ಷಣ ಇಲಾಖೆ ಕೊಡಮಾಡುವ 2023-24ನೇ ಸಾಲಿನ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿಗೆ ಕಿರಿಯ, ಹಿರಿಯ ಹಾಗೂ ಪ್ರೌಢಶಾಲಾ ವಿಭಾಗದಿಂದ ತಲಾ 5 ಜನ ಶಿಕ್ಷಕರು ಆಯ್ಕೆಯಾಗಿದ್ದಾರೆ.

ಜಿಲ್ಲೆಯ ಕಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಚಾಮರಾಜನಗರ ತಾಲೂಕಿನ ಸಂಧ್ಯಾಕುಮಾರಿ, ಗುಂಡ್ಲುಪೇಟೆ ತಾಲೂಕಿನ ಮಲ್ಲಮ್ಮನಹುಂಡಿ ಶಾಲೆಯ ಎಂ.ಎಸ್.ನಂದಿನಿ, ಕೊಳ್ಳೇಗಾಲ ತಾಲೂಕಿನ ಹಳೆ ಅಣಗಳ್ಳಿ ನಟರಾಜು, ಹನೂರು ತಾಲೂಕಿನ ಗೋಡಾಸ್ ನಗರ ಶಾಲೆಯ ಜಾನ್ ಬ್ರಿಟೋಸಿ ಹಾಗೂ ಯಳಂದೂರು ತಾಲೂಕಿನ ಸಹ ಶಿಕ್ಷಕಿ ಬಿ.ದಾಕ್ಷಾಯಿಣಿ ಆಯ್ಕೆಯಾಗಿದ್ದಾರೆ.

ಹಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಚಾಮರಾಜನಗರ ತಾಲೂಕಿನ ಮಂಗಲ ಶಾಲೆಯ ಪಿ.ರಾಜೇಶ್ವರಿ, ಗುಂಡ್ಲುಪೇಟೆ ತಾಲೂಕಿನ ಕೂತೂರು ಶಾಲೆಯ ನಂಜನಾಯಕ, ಕೊಳ್ಳೇಗಾಲದ ನ್ಯಾಷಿನಲ್ ಹಿರಿಯ ಪ್ರಾಥಮಿಕ ಶಾಲೆಯ ಪುಷ್ಪಲತಾ, ಹನೂರಿನ ಕೊಂಬುಡಿಕ್ಕಿ ಶಾಲೆಯ ಪಿ.ಮಹದೇವಮ್ಮ ಹಾಗೂ ಯಳಂದೂರು ತಾಲೂಕಿನ ಯರಿಯೂರು-2 ಶಾಲೆಯ ಸಹ ಶಿಕ್ಷಕಿ ಎಸ್.ಮಂಗಲಮ್ಮ ಆಯ್ಕೆಯಾಗಿದ್ದಾರೆ.

ಪ್ರೌಢಶಾಲಾ ವಿಭಾಗದಲ್ಲಿ ಚಾಮರಾಜನಗರ ತಾಲೂಕಿನ ಸಂತೇಮರಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ಶಿಕ್ಷಕ ಎಸ್.ಎಸ್.ಪ್ರಕಾಶ್, ಗುಂಡ್ಲುಪೇಟೆ ತಾಲೂಕಿನ ಕಬ್ಬಹಳ್ಳಿ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಸಿದ್ದರಾಜಪ್ಪ, ಕೊಳ್ಳೇಗಾಲ ಸೂರಾಪುರ ಶಾಲೆಯ ಮೇರಿ ನಿರ್ಮಲ, ಹನೂರು ಚನ್ನಾಲಿಂಗನಹಳ್ಳಿ ಪ್ರೌಢಶಾಲೆಯ ಕಲಾ ಶಿಕ್ಷಕ ಜಿ.ಲೋಕೇಶ್ ಹಾಗೂ ಯಳಂದೂರು ಜೆಎಸ್‌ಎಸ್ ಬಾಲಿಕಾ ಪ್ರೌಢಶಾಲೆಯ ಡಿ.ಆರ್.ಕವಿತಾ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net