

ಚಾಮರಾಜನಗರ: ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಸೆ.7ರಂದು ಉದ್ಯೋಗಕ್ಕಾಗಿ ನೇರ ಸಂದರ್ಶನವನ್ನು ನಗರದಲ್ಲಿ ಹಮ್ಮಿಕೊಳ್ಳಲಾಗಿದೆ.
ನಗರದ ಜಿಲ್ಲಾಡಳಿತ ಭವನದ 2ನೇ ಮಹಡಿಯಲ್ಲಿರುವ ಕೊಠಡಿ ಸಂಖ್ಯೆ 210ರ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಅಂದು ಬೆಳಗ್ಗೆ 10.30 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಆಯೋಜಿಸಲಾಗಿದೆ.
ಸರ್ವೀಸ್ ಜೆಂಕ್ಷನ್ ಕಂಪನಿಯಲ್ಲಿ ಖಾಲಿ ಇರುವ ಫೀಲ್ಡ್ ಟೆಕ್ನಿಷಿಯನ್ ಹುದ್ದೆಗೆ ಐಟಿಐ (ಯಾವುದೇ ಟ್ರೇಡ್ ಪುರುಷ ಅಭ್ಯರ್ಥಿಗಳು ಮಾತ್ರ), ಹೆಚ್.ಡಿಎಫ್.ಸಿ ಬ್ಯಾಂಕ್ ಮೈಕ್ರೋ ಪೈನಾನ್ಸ್ ಕಂಪನಿಯಲ್ಲಿ ಸೇಲ್ಸ್ ಆಫಿಸರ್ ಹುದ್ದೆಗೆ ಯಾವುದೇ ಪದವೀಧರರು ಹಾಗೂ ಸುಪ್ರೀಮ್ ಫಾರ್ಮಸೆಟಿಕಲ್ ಪ್ರೈ.ಲಿ. ಕಂಪನಿಯಲ್ಲಿ ಲ್ಯಾಬ್ ಟೆಕ್ನಿಷಿಯನ್ ಹುದ್ದೆಗೆ ಬಿಎಸ್ಸಿ, ಎಂಎಸ್ಸಿ (ಕೆಮಿಸ್ಟ್ರಿ), ಬಿ ಫಾರ್ಮಸಿ ಮತ್ತು ಎಂ-ಫಾರ್ಮಸಿ ವಿದ್ಯಾರ್ಹತೆ ಹೊಂದಿರಬೇಕು. 18 ರಿಂದ 30ರ ವಯೋಮಿತಿಯ ಪುರುಷ ಅಭ್ಯರ್ಥಿಗಳು ಸಂದರ್ಶನದಲ್ಲಿ ಭಾಗವಹಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ದೂ.ಸಂ 08226-224430 ಸಂಪರ್ಕಿಸುವಂತೆ ಜಿಲ್ಲಾ ಉದ್ಯೋಗಾಧಿಕಾರಿ ಎ. ಮಹಮದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.