

ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯ ಪ್ರದೇಶ ವ್ಯಾಪ್ತಿಯ ಅತ್ತಿಖಾತೆ ಹಳ್ಳದಲ್ಲಿ ಹುಲಿ ಕಳೇಬರ ಪತ್ತೆಯಾಗಿದ್ದು, ಕಾದಾಟದಲ್ಲಿ ಮೃತಪಟ್ಟಿರಬಹುದು ಎಂದು ಅರಣ್ಯ ಇಲಾಖೆ ಶಂಕಿಸಿದೆ.
ಬೈಲೂರು ವನ್ಯಜೀವಿ ವಲಯದ ಪಿ.ಜಿ ಪಾಳ್ಯ ಶಾಖೆಯ ಬೆಳ್ಳಾಜಿ ಗಸ್ತಿನ ಅತ್ತಿಖಾನೆ ಎಸ್ಟೇಟ್‌ನ ಅತ್ತಿಖಾನೆ ಹಳ್ಳದ ಬಳಿ ಮಂಗಳವಾರ ಹುಲಿಯ ಮೃತದೇಹ ಪತ್ತೆಯಾಗಿತ್ತು. ಸುಮಾರು 4ರಿಂದ 5 ವರ್ಷದ ಹೆಣ್ಣು ಹುಲಿಯ ಕಳೇಬರವನ್ನು ಗುರುತಿಸಿದ ಅರಣ್ಯ ಇಲಾಖೆ ಎನ್‌ಟಿಸಿಎ ಮಾರ್ಗಸೂಚಿ ಪ್ರಕಾರ ಸಮಿತಿಯ ಸದಸ್ಯರು ಮತ್ತು ಪಶು ವೈದ್ಯಾಧಿಕಾರಿಗಳ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು.
ಬೇರೆ ಹುಲಿಯೊಂದಿಗೆ ಕಾದಾಟದಲ್ಲಿ ಈ ಹುಲಿಯು ಮೃತಪಟ್ಟಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಹುಲಿಯ ಕೋರೆ ಹಲ್ಲುಗಳು, ಉಗುರುಗಳು, ಚರ್ಮ ಮತ್ತು ದೇಹದ ಭಾಗಗಳು ಸಹಜ ಸ್ಥಿತಿಯಲ್ಲಿದ್ದವು ಎಂದು ಯಳಂದೂರು ವನ್ಯಜೀವಿ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.