ಪಿ.ಶ್ರುತಿ ಕೆಂಡಗಣ್ಣಸ್ವಾಮಿ, ಕಾವ್ಯಾ ಪ್ರಮೋದ್‌ಗೆ ಪಿಎಚ್.ಡಿ

Published on

ಗುಂಡ್ಲುಪೇಟೆ: ತಾಲೂಕಿನ ಮಾಡ್ರಹಳ್ಳಿ ಗ್ರಾಮದ ಪಿ.ಶ್ರುತಿ ಕೆಂಡಗಣ್ಣಸ್ವಾಮಿ ಅವರು ಡಾ.ನಾಗರಾಜ್ ಜಿ.ಚೋಲ್ಲಿ ಅವರ ಮಾರ್ಗದರ್ಶನದಲ್ಲಿ ‘ಸಾಫ್ಟ್‌ವೇರ್ ಏಜಿಂಗ್ ಪ್ರಿಡಿಕ್ಷನ್ ಆ್ಯಂಡ್ ರಿಜುವೆನೇಷನ್ ಮಾಡೆಲ್ ಫಾರ್ ಕ್ಲೌಡ್ ಪ್ಲಾಟ್‌ಫಾರ್ಮ್’ ವಿಷಯ ಕುರಿತು ಮಂಡಿಸಿದ್ದ ಪ್ರಬಂಧವನ್ನು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಪಿಎಚ್.ಡಿ ಪದವಿಗೆ ಅಂಗೀಕರಿಸಿದೆ.

ಮೈಸೂರಿನ ಜೆ.ಎಸ್.ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ಸ್ನಾತಕೋತ್ತರ ವಿಭಾಗದ ರಾಸಾಯನಶಾಸ್ತ್ರ ಸಹಾಯಕ ಪ್ರಾಧ್ಯಾಪಕಿ ಹಾಗೂ ಹಂಗಳ ಗ್ರಾಮದ ಕಾವ್ಯಾ ಪ್ರಮೋದ್ ಅವರು ಡಾ.ಎನ್.ಎ.ಚಾಮರಾಜು ಅವರ ಮಾರ್ಗದರ್ಶನದಲ್ಲಿ ‘ಮಿಕ್ಸ್‌ಡ್ ಮೆಟಲ್ ಆಕ್ಸೈಡ್ ನ್ಯಾನೋಫಿಲ್ಲರ್ಸ್ ಇಂಟ್ರುಡ್ಯೂಸ್ಡ್ ಮೆಕ್ಯಾನಿಕಲಿ ಫ್ಲೆಕ್ಸಿಬಲ್ ಪಾಲಿಮರ್ ಬೇಸ್ಡ್ ನ್ಯಾನೋ ಕಾಂಪೋಸಿಟ್ಸ್ ಫಾರ್ ಅಪ್ಟಿಕಲ್ ಆ್ಯಂಡ್ ಅಪ್ಟೋ ಎಲೆಕ್ಟ್ರಾನಿಕ್ ಅಪ್ಲಿಕೇಷನ್ಸ್’ ವಿಷಯ ಕುರಿತು ಮಂಡಿಸಿದ್ದ ಪ್ರಬಂಧವನ್ನು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಪಿಎಚ್.ಡಿ ಪದವಿಗೆ ಅಂಗೀಕರಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net