ಶಾಸಕ ಸಿ.ಪುಟ್ಟರಂಗಶೆಟ್ಟಿಗೆ ಸನ್ಮಾನ

24chn1
Published on

ಚಾಮರಾಜನಗರ: ದಲಿತ ಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ಭೀಮ ಸಂಕಲ್ಪ ಸಮಾವೇಶದ ಯಶಸ್ಸಿಗೆ ಕಾರಣರಾದ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರನ್ನು ಮುಖಂಡರು ನಗರದ ಪ್ರವಾಸಿಮಂದಿರದಲ್ಲಿ ಸನ್ಮಾನಿಸಿದರು.

ಒಕ್ಕೂಟದ ಸಂಚಾಲಕ ಕೆ.ಎಂ.ನಾಗರಾಜು ಮಾತನಾಡಿ, ಶಾಸಕ ಸಿ.ಪುಟ್ಟರಂಗಶೆಟ್ಟ ಅವರು ಭೀಮ ಸಂಕಲ್ಪ ಸಮಾವೇಶವನ್ನು ಯಶ್ವಸಿಗೊಳಿಸಿಕೊಟ್ಟ ಕಾರಣ ಅವರನ್ನು ಸನ್ಮಾನಿಸಲಾಗಿದೆ. ಮುಂದಿನ ದಿನಗಳಲ್ಲಿ ಅವರಿಗೆ ಸಮಿತಿಯಿಂದ ಎಲ್ಲ ರೀತಿ ಸಹಕಾರ ನೀಡಲಾಗುವುದು ಎಂದರು.
ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಸಿ.ಎಂ.ಶಿವಣ್ಣ, ಮುಖಂಡರಾದ ಬಸವಣ್ಣ, ನಾಗಣ್ಣ, ಶುಭೋದಯ ಸಿದ್ದರಾಜು, ರವಿಚಂದ್ರ ಪ್ರಸಾದ್ ಕಹಳೆ, ನಿವೃತ್ತ ಎಎಸ್‌ಐ ಸಿದ್ದರಾಜು, ಮಸಣಾಪುರ ನಾಗರಾಜು, ಸಾಹಿತಿ ದೊಡ್ಡರಾಯಪೇಟೆ ಸಿದ್ದರಾಜು , ದೊಡ್ಡರಾಯಪೇಟೆ ಲೋಕೇಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net