ನಕಲಿ ಪತ್ರ ಬರೆದವರನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಿ

21-GPT-2
Published on

ಗುಂಡ್ಲುಪೇಟೆ: ತನ್ನ ಹೆಸರಿನಲ್ಲಿ ಪೊಲೀಸರ ವಿರುದ್ಧ ನಕಲಿ ಪತ್ರ ಬರೆದಿರುವವರನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಪ್ರಧಾನ ಕಾರ್ಯದರ್ಶಿ ಶಿವಪುರ ಮಂಜಪ್ಪ ಡಿವೈಎಸ್‌ಪಿ ಅವರನ್ನು ಒತ್ತಾಯಿಸಿದ್ದಾರೆ.

ಎಎಸ್‌ಐಗಳಾದ ಮಹೇಶ್, ಶಿವಶಂಕರಪ್ಪ, ಹೆಡ್‌ಕಾನ್‌ಸ್ಟೆಬಲ್‌ಗಳಾದ ಹಸಗೂಲಿ ರವಿ, ದಿವಾಕರ, ಗಂಗಾಧರ, ಚಾಲಕರಾದ ನಂಜಪ್ಪ ಹಾಗೂ ಹೊರೆಯಾಲ ಮಹದೇವಸ್ವಾಮಿ ಎಂಬುವರು ನನಗೆ ಕಿರುಕುಳ ನೀಡುತ್ತಿದ್ದು, ಅವರನ್ನು ವರ್ಗಾವಣೆ ಮಾಡುವಂತೆ ಕೆಲವು ದಿನಗಳ ಹಿಂದೆ ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅವರಿಗೆ ನನ್ನ ಹೆಸರಿನಲ್ಲಿ ಪತ್ರ ಬರೆಯಲಾಗಿತ್ತು. ಈ ಬಗ್ಗೆ ಆ. 19ರಂದು ಡಿವೈಎಸ್‌ಪಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಿ ಪತ್ರವನ್ನು ಪರಿಶೀಲಿಸಿದಾಗ ಅದು ನಕಲಿಯಾಗಿದ್ದು ಸಹಿ ಮತ್ತು ಅಕ್ಷರಗಳು ನನ್ನವಲ್ಲ ಎಂಬುದಾಗಿ ಹೇಳಿದ್ದೆ. ಅಲ್ಲದೆ, ಪತ್ರದಲ್ಲಿ ಬರೆದಿರುವ ಎಲ್ಲ ಅಂಶಗಳೂ ಸುಳ್ಳಾಗಿವೆ ಎಂದು ಮನವರಿಕೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ನನ್ನ ಹೆಸರು ದುರ್ಬಳಕೆ ಮಾಡಿಕೊಳ್ಳುವ ಸಂಭವವಿರುವುದರಿಂದ ಕೂಡಲೇ ನಕಲಿ ಪತ್ರ ಬರೆದಿರುವವರನ್ನು ಪತ್ತೆಹಚ್ಚಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮಂಜಪ್ಪ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net