ವಸುಪಾಲ್ ತಂಡಕ್ಕೆ ಗೆಲುವು

21chn4
Published on

ಚಾಮರಾಜನಗರ: ತಾಲೂಕಿನ ಕುದೇರು ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ವಸುಪಾಲ್ ಮತ್ತು ತಂಡ ಗೆಲುವು ಸಾಧಿಸಿತು.

ಗ್ರಾಮದಲ್ಲಿರುವ ಸಂಘದ ಕಚೇರಿಯಲ್ಲಿ ಭಾನುವಾರ ಚುನಾವಣೆ ನಿಗದಿಯಾಗಿತ್ತು. 12 ಸ್ಥಾನಗಳಲ್ಲಿ ಮಹಾದೇವಯ್ಯ, ಎಸ್.ಶಿವಶಂಕರ್ ಅವಿರೋಧವಾಗಿ ಆಯ್ಕೆಯಾದರು. ಉಳಿದಂತೆ ಸಾಲಗಾರರ ಸದಸ್ಯ ಕ್ಷೇತ್ರದಲ್ಲಿ ಕೆ.ಎಸ್.ಕುಮಾರ(61), ತ್ರಿವೇಣಿ(78 ), ನಾಗರಾಜಮ್ಮ(51), ಪ್ರೇಮಾ (99), ಮಹದೇವಪ್ಪ(96), ಎಂ.ಮಹದೇವಯ್ಯ(119), ಕೆ.ಎಸ್.ಮಹದೇವೇಗೌಡ (52), ರತ್ನಮ್ಮ (130), ಕೆ.ಎಂ.ರಾಜೇಂದ್ರಸ್ವಾಮಿ (133), ರೇವಣ್ಣ (99), ಎಸ್.ವಿಜಯ್‌ಕುಮಾರ್ (66), ಕೆ.ವಿ.ವೃಷಭೇಂದ್ರಸ್ವಾಮಿ (94), ಎಂ.ಶಿವಣ್ಣ (102), ವೈ.ಪಿ.ಸತೀಶ 125 ಮತ ಪಡೆದುಕೊಂಡರು.

ಸಾಲಗಾರರಲ್ಲದ ಕ್ಷೇತ್ರದಲ್ಲಿ ಕೆ.ಎಂ.ಪುಟ್ಟಸ್ವಾಮಿ(2 ), ಡಿ.ವಸುಪಾಲ್(44 ), ಎಸ್.ವೀರಭದ್ರಪ್ಪ (1), ಸುನೀಲ್ 36 ಮತ ಗಳಿಸಿದರು. ಅಂತಿಮವಾಗಿ ಅಧಿಕ ಮತಗಳನ್ನು ಪಡೆದಿದ್ದ ಕೆ.ಎಂ ರಾಜೇಂದ್ರ ಸ್ವಾಮಿ, ವಸುಪಾಲ್, ವೈ.ಪಿ.ಸತೀಶ, ರೇವಣ್ಣ, ಮಹದೇವಪ್ಪ, ಕೆ.ವಿ.ವೃಷಭೇಂದ್ರಸ್ವಾಮಿ, ರತ್ನಮ್ಮ, ಪ್ರೇಮಾ, ಎಂ.ಶಿವಣ್ಣ, ಎಂ.ಮಹಾದೇವಯ್ಯ ಗೆಲುವು ಸಾಧಿಸಿದರು. ಚುನಾವಣಾಧಿಕಾರಿಯಾಗಿ ತ್ಯಾಗರಾಜ್ ಪ್ರಸಾದ್ ಕಾರ್ಯನಿರ್ವಹಿಸಿದರು. ಸಹಕಾರ ಸಂಘದ ಕಾರ್ಯದರ್ಶಿ ಮಹೇಶ್, ಕುದೇರು. ಬಡಗಲಮೋಳೆ, ಕೆಂಕಲಮೋಳೆ, ಹೆಗ್ಗವಾಡಿ, ಹೊನ್ನೇಗೌಡನ ಹುಂಡಿ, ಯಲಕ್ಕೂರು ಗ್ರಾಮಸ್ಥರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net