ವೀರ ಪುರುಷರ ಸ್ಮರಣೆ

15chn1
Published on

ಚಾಮರಾಜನಗರ: ಸ್ವರಾಜ್ಯ ಮತ್ತು ಸುರಾಜ್ಯ ಪರಿಕಲ್ಪನೆಯ ಮೂಲಕ ದೇಶಕ್ಕಾಗಿ ತ್ಯಾಗ ಬಲಿದಾನ ಮಾಡಿದ ವೀರ ಪುರುಷರನ್ನು ಸ್ಮರಣೆ ಮಾಡಬೇಕಿದೆ ಎಂದು ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಮೈಸೂರು ವಿಭಾಗದ ಮುಖ್ಯಸ್ಥರಾದ ಡಾ. ವಿ.ರಂಗನಾಥ್ ತಿಳಿಸಿದರು.

ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಇತ್ತೀಚಿಗೆ ಆಯೋಜಿಸಿದ್ದ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಸ್ವರಾಜ್ಯ ಮತ್ತು ಸುರಾಜ್ಯ ಕವಿಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಡಾ. ಗುರುಕಿರಣ್ ಮಾತನಾಡಿ, ರಾಷ್ಟ್ರೀಯತೆ, ರಾಷ್ಟ್ರದ ಬೆಳವಣಿಗೆ, ಉನ್ನತಿ ಪ್ರಜೆಗಳ ಕಾರ್ಯ ಯೋಜನೆಯಾಗಬೇಕು. ಕವಿಗಳು ಕವಿತೆಗಳನ್ನು ವಾಚಿಸುವಾಗ ಶಬ್ಧದ ಅರ್ಥ, ಭಾವನೆ, ಸಂವೇದನೆ ಹಾಗೂ ಭಾಷಾ ಶುದ್ದತೆಗೆ ಮುಖ್ಯ ಸ್ಥಾನ ನೀಡಬೇಕು ಎಂದರು.

ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಸುರೇಶ್ ಎನ್ ಋಗ್ವೇದಿ ಮಾತನಾಡಿ, ರಾಷ್ಟ್ರೀಯ ಸಾಹಿತ್ಯ ರಚನೆಯು ಇಂದು ಬಹಳ ಮುಖ್ಯವಾಗಿದೆ. ವಿದ್ಯಾರ್ಥಿ ಮತ್ತು ಯುವಕರಲ್ಲಿ ರಾಷ್ಟ್ರೀಯ ಮೌಲ್ಯಗಳನ್ನು ಅರ್ಥ ಮಾಡಿಸುವ ಸಾಹಿತ್ಯ ರಚನೆ ಅವಶ್ಯವಿದೆ. ಸಂಸ್ಕೃತಿ, ಪರಂಪರೆ, ಸ್ವಾತಂತ್ರ್ಯದ ಚಿಂತನೆ, ಅಭಿವೃದ್ದಿ ಕುರಿತು ಯೋಚಿಸುವ, ಬರೆಯುವ ಕಾರ್ಯಗಳನ್ನು ಮಾಡಬೇಕಿದೆ ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶೈಲಕುಮಾರ್, ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುದರ್ಶನ್, ಗೌರವಾಧ್ಯಕ್ಷರಾದ ಡಾ. ನಿರ್ಮಲ, ಕವಿಗಳಾದ ಕೀರ್ತಿ ಶೇಖರ್, ಶೃತಿ, ಅನಂದ್ ಬೆಂಡರವಾಡಿ, ಸುರೇಶ್ ದೊಡ್ಡಮೋಳೆ, ಗುಂಡ್ಲುಪೇಟೆ ಯೋಗನಂದ್, ಕನ್ನಡ ಸಾಹಿತ್ಯ ಪರಿಷತ್ತಿನ ಮಹಾಲಿಂಗಗಿರ್ಗಿ, ಕಲೆನಟರಾಜು, ಶಿವಸ್ವಾಮಿ, ಸರಸ್ವತಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net