ಕ್ಯಾನ್ಸರ್ ಉಚಿತ ತಪಾಸಣಾ ಶಿಬಿರ

13chn1
Published on

ಚಾಮರಾಜನಗರ:ತಾಲೂಕಿನ ಇರಸವಾಡಿ ಗ್ರಾಮದ ಆರೋಗ್ಯ ಮತ್ತು ಕ್ಷೇಮ ಕೇಂದ್ರದಲ್ಲಿ ಓಡಿಪಿ ಸಂಸ್ಥೆ ಮತ್ತು ಸಂತ ಜೋಸೆಫರ ಆಸ್ಪತ್ರೆ, ಕಾರಿತ್ತಾಸ್ ಇಂಡಿಯಾ, ಮೈಸೂರಿನ ಸಂಘ ಮಿತ್ರ, ಇರಸವಾಡಿ ಗ್ರಾಮ ಪಂಚಾಯಿತಿ, ಆರೋಗ್ಯ ಕೇಂದ್ರದ ವತಿಯಿಂದ ಇತ್ತೀಚಿಗೆ ಆಯೋಜಿಸಿದ್ದ ಕ್ಯಾನ್ಸರ್ ಉಚಿತ ತಪಾಸಣಾ ಶಿಬಿರವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚಿನ್ನಮ್ಮ ಉದ್ಘಾಟಿಸಿದರು. ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಯ ಡಾ.ನಿಕಿತನ್, ಗ್ರಾಪಂ ಉಪಾಧ್ಯಕ್ಷೆ ಮಾಲಾಂಬಿಕಾ, ಸದಸ್ಯರಾದ ಕೆ,ಆರ್. ನಾಗರಾಜು, ಕ್ಷೇಮ ಕೇಂದ್ರದ ರೀನಾ, ವಲಯ ಸಂಯೋಜಕ ಎಂ.ಸಿದ್ದರಾಜು, ಸಂಘಟಕರಾದ ಲತಾ, ಬಸಮ್ಮ, ಪರಮೇಶ್ವರಿ, ಪ್ರೇಮಾ, ಅನ್ನಪೂರ್ಣ, ಗಾಯತ್ರಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net