ಸಮಾನತೆಗೆ ವಚನ ಚಳುವಳಿ ಬುನಾದಿ

13chn7
Published on

ಚಾಮರಾಜನಗರ: 12ನೇ ಶತಮಾನದಲ್ಲಿ ನಡೆದ ವಚನ ಚಳುವಳಿಯಿಂದಾಗಿ ಸಮಾಜದಲ್ಲಿ ಸೀ-ಪುರುಷರು ಸಮಾನತೆಯಿಂದ ಬದುಕುವಂತಾಗಿದೆ ಎಂದು ಹರವೆ ವಿರಕ್ತ ಮಠದ ಪೀಠಾಧ್ಯಕ್ಷ ಶ್ರೀ ಸರ್ಪಭೂಷಣಸ್ವಾಮೀಜಿ ಹೇಳಿದರು.

ತಾಲೂಕಿನ ಹರವೆ ಗ್ರಾಮದಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಹಾಗೂ ಶ್ರೀ ಚನ್ನಬಸವೇಶ್ವರ ವಿದ್ಯಾಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದ ಸಾನಿದ್ಯ ವಹಿಸಿ ಮಾತನಾಡಿದರು.

ಶರಣರಾದ ಅಕ್ಕಮಹದೇವಿ, ಆಯ್ದಕ್ಕಿ ಲಕ್ಕಮ್ಮರಂತಹ ವಚನಕಾರರು ಲಿಂಗ ಅಸಮಾನತೆಯ ವಿರುದ್ದ ಹೋರಾಡಿ ಸಮಾನತೆಯನ್ನು ಪ್ರತಿಪಾದಿಸಿದರು. ಅದರ ಫಲವೇ ಇಂದು ಮಹಿಳೆ ಪುರುಷರಷ್ಟೇ ಸರಿ ಸಮಾನವಾಗಿ ಎಲ್ಲ ರಂಗದಲ್ಲಿಯೂ ಛಾಪು ಮೂಡಿಸಿದ್ದಾಳೆ. ಶರಣ ಪರಂಪರೆ ಸಮಾನತೆ ಆಶಯಗಳನ್ನು ಒಳಗೊಂಡಿದೆ ಎಂದರು.

ಹರವೆ ಮೋರಾರ್ಜಿ ವಸತಿ ಶಾಲೆಯ ಪ್ರಾಂಶುಪಾಲೆ ಸವಿತಾ ಮೂಡ್ನಾಕೂಡು ಮಾತನಾಡಿ,12ನೇ ಶತಮಾನದಲ್ಲಿ ಶಿವ ಶರಣೆಯರು ಆಡು ಭಾಷೆಯಲ್ಲಿ ರಚಿಸಿದ ವಚನಗಳು ಜನರ ಬದುಕನ್ನು ಕಟ್ಟಿಕೊಟ್ಟಿತ್ತು. ವೈಚಾರಿಕ ಪ್ರಬುದ್ದತೆಯಿಂದ ಮೆರೆದ ಅವರು ಅಜ್ಞಾನವನ್ನು ಹೋಗಲಾಡಿಸಿ, ಸೈದ್ಧಾಂತಿಕ ಸಂಸ್ಕೃತಿಯನ್ನು ಪ್ರತಿಪಾದಿಸಿದರು ಎಂದರು.

ದತ್ತಿ ದಾನಿಗಳಾದ ಜಿ.ಪಂ.ಮಾಜಿ ಸದಸ್ಯ ಪಿ.ಮರಿಸ್ವಾಮಿ, ವೈ.ಪಿ.ರಾಜೇಂದ್ರ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಪ್ರಧಾನ ಕಾರ್ಯದರ್ಶಿ ಬಿ.ಕೆ. ರವಿಕುಮಾರ್ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net