

ಚಾಮರಾಜನಗರ:ಗೊಬ್ಬರದ ಅಂಗಡಿಗೆ ಆಕಸ್ಮಿಕ ಬೆಂಕಿ ತಗುಲಿ, ಅನೇಕ ಪರಿಕರಗಳು ಸುಟ್ಟು ಹೋಗಿದ್ದು ಅಪಾರ ನಷ್ಟವಾಗಿದೆ.
ತಾಲೂಕಿನ ಹೆಬ್ಬಸೂರು ಗ್ರಾಮದ ರೈತ ಮುಖಂಡ ಹೆಬ್ಬಸೂರು ಬಸವಣ್ಣ ಅವರಿಗೆ ಸೇರಿದ ಗೊಬ್ಬರದ ಅಂಗಡಿಯಲ್ಲಿ ಮಂಗಳವಾರ ಮಧ್ಯರಾತ್ರಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದರಿಂದಾಗಿ ಮಳಿಗೆಯಲ್ಲಿದ್ದ ಕಂಪ್ಯೂಟರ್, ಪ್ರಿಂಟರ್, ಯುಪಿಎಸ್ ಹಾಗೂ ಇನ್ನಿತರೆ ಸಾಮಗ್ರಿಗಳು ಸಟ್ಟು ಹೋಗಿದೆ.
ಈ ಸಂಬಂಧ ವಿಜಯವಾಣಿ ಜತೆ ಹೆಬ್ಬಸೂರು ಬಸವಣ್ಣ ಮಾತನಾಡಿ, ಈಗಾಗಲೇ ನಬಾರ್ಡ್ ಹಾಗೂ ಇನ್ನಿತರೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ರಾಮಸಮುದ್ರ ಪೂರ್ವ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿಸಿದರು.