

ಚಾಮರಾಜನಗರ: ಸಂವಿಧಾನದ ಉಳಿವಿಗಾಗಿ ಆ. 20 ರಂದು ಭೀಮ ಸಂಕಲ್ಪ ಸಮಾವೇಶವನ್ನು ಅಯೋಜಿಸಲಾಗಿದೆ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಕೆ.ಎಂ.ನಾಗರಾಜು ತಿಳಿಸಿದರು.
ನಗರದ ಡಾ.ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಭೀಮ ಸಂಕಲ್ಪ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಡಾ. ಬಿ.ಆರ್.ಅಂಬೇಡ್ಕರ್ ಬರೆದಿರುವ ಸಂವಿಧಾನದ ಉಳಿವಿಗಾಗಿ ಭೀಮ ಸಂಕಲ್ಪ ಸಮಾವೇಶವನ್ನು ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಅಯೋಜಿಸಲಾಗಿದೆ. ಸಮಾವೇಶದಲ್ಲಿ ಜಿಲ್ಲೆಯ ಚಾಮರಾಜನಗರ, ಕೊಳ್ಳೇಗಾಲ, ಯಳಂದೂರು, ಗುಂಡ್ಲುಪೇಟೆ, ಹನೂರು ತಾಲೂಕುಗಳಿಂದ ಸುಮಾರು 4-5 ಸಾವಿರ ಜನರು ಸೇರುವ ನಿರೀಕ್ಷೆ ಇದ್ದು, ಈಗಾಗಲೇ ಕರಪತ್ರ ಹಂಚುವ ಕೆಲಸ ಪ್ರಾರಂಭಿಸಲಾಗಿದೆ. ಈ ಮೂಲಕ ಸಂವಿಧಾನದಲ್ಲಿ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ತಿ.ನರಸೀಪುರದ ನಳಂದ ಬುದ್ದ ವಿಹಾರದ ಭೋದಿರತ್ನ ಭಂತೇಜಿ , ಮೈಸೂರಿನ ಉರಿಲಿಂಗಿ ಪೆದ್ದಿ ಮಠದ ಜ್ಞಾನಪ್ರಕಾಶ್ ಸ್ವಾಮೀಜಿ ಸಾನಿಧ್ಯ ವಹಿಸುವರು, ರಾಜ್ಯ ಸರ್ಕಾರದ ಸಚಿವರಾದ ಎಚ್.ಸಿ.ಮಹದೇವಪ್ಪ, ಸತೀಶ್ ಜಾರಕಿಹೊಳಿ, ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್, ಶಾಸಕ ಸಿ.ಪುಟ್ಟರಂಗಶೆಟ್ಟಿ, ಎ.ಆರ್.ಕೃಷ್ಣಮೂರ್ತಿ, ಎಚ್.ಎಸ್.ಗಣೇಶ್‌ಪ್ರಸಾದ್, ಮಂಜುನಾಥ್ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಸಭೆಯಲ್ಲಿ ಲೀನಾ, ಮುಖಂಡ ಸಿ.ಎಂ.ಶಿವಣ್ಣ, ದೊಡ್ಡರಾಯಪೇಟೆ ಸಿದ್ದರಾಜು, ಸುಭಾಷ್ ಮಾಡ್ರಹಳ್ಳಿ, ಸಿ.ಕೆ.ಮಂಜುನಾಥ್, ತಾ.ಪಂ.ಮಾಜಿ ಸದಸ್ಯ ಶಿವಸ್ವಾಮಿ, ಗುತ್ತಿಗೆದಾರ ಬಸವಣ್ಣ, ಬಸವನಪುರ ರಾಜಶೇಖರ್, ಮರಿಯಾಲದಹುಂಡಿ ಕುಮಾರ್, ನಾಗಣ್ಣ, ಬಸವಣ್ಣ ಅಮಚವಾಡಿ ಶಿವಣ್ಣ, ಸಿದ್ದರಾಜು, ಗಣೇಶ್ ಪ್ರಸಾದ್, ಕೆ.ಆರ್.ನಾರಾಯಣ್ ಉಪಸ್ಥಿತರಿದ್ದರು.