ತಾಲೂಕು ಪತ್ರಿಕಾ ಪ್ರತಿನಿಧಿಗಳ ಸಂಘ ರಚನೆ

07raju1
Published on

ಚಾಮರಾಜನಗರ: ತಾಲೂಕು ಪತ್ರಿಕಾ ಪ್ರತಿನಿಧಿಗಳ ಹಿತರಕ್ಷಣೆ ಹಾಗೂ ಸಂಘಟನೆಯ ದೃಷ್ಠಿಯಿಂದ ನೂತನವಾಗಿ ಚಾ.ನಗರ ತಾಲೂಕು ವ್ಯಾಪ್ತಿಯಲ್ಲಿ ವಿವಿಧ ಪತ್ರಿಕೆಗಳಲ್ಲಿ ಪ್ರತಿನಿಧಿಗಳಾಗಿರುವ 50ಕ್ಕು ಹೆಚ್ಚು ಮಂದಿ ಸಂಘಟನೆಗೊಂಡ ಸಂಘ ರಚನೆ ಮಾಡಲಾಯಿತು.

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಪತ್ರಿಕಾ ಪ್ರತಿನಿಧಿಗಳ ಎರಡನೇ ಸಭೆಯಲ್ಲಿ ಪ್ರತಿಕಾ ಪ್ರತಿನಿಧಿಗಳ ಸಂಘ ರಚನೆಗೆ ಅನುಮೋದನೆ ನೀಡಿದರು. ಸಂಘದ ನೂತನ ಅಧ್ಯಕ್ಷರಾಗಿ ದೊಡ್ಡರಾಯಪೇಟೆ ಸಿ. ಪುರುಷೋತ್ತಮ್, ಪ್ರಧಾನ ಕಾರ್ಯದರ್ಶಿಯಾಗಿ ಎನ್. ಅಕ್ಷಯ್, ಗೌರವ ಅಧ್ಯಕ್ಷರಾಗಿ ಎಚ್.ಎಸ್. ಚಂದ್ರಶೇಖರ್, ಖಜಾಂಚಿಯಾಗಿ ಪ್ರತಾಪ್, ಉಪಾಧ್ಯಕ್ಷರಾಗಿ ಹೆಗ್ಗವಾಡಿ ಎಸ್. ಮಹದೇವ್, ಉಡಿಗಾಲ ಶೇಖರ್, ದೇಮಹಳ್ಳಿ ಶಿವಕುಮಾರ್, ಕಾರ್ಯದರ್ಶಿಗಳಾಗಿ ನವೀನ್‌ಕುಮಾರ್ ರಾಮಸಮುದ್ರ, ಸಹ ಕಾರ್ಯದರ್ಶಿಯಾಗಿ ಎಲ್. ಶಿವಲಿಂಗಮೂರ್ತಿ, ಕಾನೂನು ಸಲಹೆಗಾರರಾಗಿ ಚಂದ್ರು, ಪತ್ರಿಕಾ ಕಾರ್ಯದರ್ಶಿಯಾಗಿ ಹರವೆ ಮಹೇಶ್ ಆಯ್ಕೆಯಾದರು.

ಸಂಘದ ನಿರ್ದೇಶಕರಾಗಿ ಪ್ರಕಾಶ್ ಬೆಲ್ಲದ್, ಆರ್.ಎನ್. ಸಿದ್ದಲಿಂಗಸ್ವಾಮಿ, ಎಂ. ರೇಣುಕೇಶ್, ಎಂ. ಲಿಂಗಪ್ಪ, ಶ್ರೀನಿವಾಸನಾಯಕ, ಮಂಜುನಾಥ ಆರಾಧ್ಯ, ಎಸ್. ಸಾಗರ್, ಎಂ.ಆರ್.ಪ್ರಕಾಶ್, ಸಿದ್ದಾಪ್ಪಾಜಿ ಇರಸವಾಡಿ, ರಾಮಸಮುದ್ರ ಸಿದ್ದರಾಜು, ಬದನಗುಪ್ಪೆ ಮಲ್ಲಣ್ಣ, ಆಲೂರು ನಾಗೇಂದ್ರಸ್ವಾಮಿ, ಹರವೆ ಪರಶಿವಪ್ಪ, ಶ್ರೀಕಾಂತ್ ಸಂತೇಮರಹಳ್ಳಿ, ಹರದನಹಳ್ಳಿ ಗಿರೀಶ್, ಜ್ಯೋತಿಗೌಡನಪುರ ಸಿದ್ದರಾಜು, ತೆಳ್ಳನೂರು ಕೆಕೆ ಮಹದೇವಯ್ಯ, ಸಿದ್ದು ರಾಮಸಮುದ್ರ, ಮಹದೇವಸ್ವಾಮಿ ಬಸವಟ್ಟಿ ಅವರನ್ನು ನೇಮಕ ಮಾಡಲಾಯಿತು.

ನೂತನ ಅಧ್ಯಕ್ಷ ದೊಡ್ಡರಾಯಪೇಟೆ ಪುರುಷೋತ್ತಮ್ ಮಾತನಾಡಿ, ತಾಲೂಕು ಕೇಂದ್ರದಲ್ಲಿ ಪತ್ರಿಕಾ ಪ್ರತಿನಿಧಿಗಳ ಸಂಘ ರಚನೆ ಮಾಡುವ ಜತೆಗೆ ಪ್ರತಿನಿಧಿಗಳ ಕುಂದು ಕೊರತೆಗಳು ಹಾಗೂ ಸರ್ಕಾರ ಮತ್ತು ಖಾಸಗಿ ಸಂಸ್ಥೆಗಳಿಂದ ಪ್ರತಿನಿಧಿಗಳಿಗೆ ದೊರೆಯುವ ಸವಲತ್ತುಗಳನ್ನು ತಲುಪಿಸುವುದು, ಕಳೆದ 30-40 ವರ್ಷಗಳಿಂದ ಇದೇ ವೃತ್ತಿಯನ್ನು ಅವಲಂಬಿಸಿಕೊಂಡು ಜೀವನ ನಡೆಸುತ್ತಿರುವ ಹಿರಿಯರನ್ನು ಗೌರವಿಸುವುದು. ಅಪಘಾತ ವಿಮೆ, ಆರೋಗ್ಯ ವಿಮೆ ಸೇರಿದಂತೆ ಪ್ರತಿನಿಧಿಗಳ ಹಿತ ರಕ್ಷಣೆಗೆ ಬದ್ದವಾಗಿ ಸಂಘಟನೆ ಬಲಗೊಳಿಸುವ ಉದ್ದೇಶ ನಮ್ಮದಾಗಿದೆ. ಎಲ್ಲರು ಸಹ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net