ರೋಗಿಗಳಿಗೆ ಹಣ್ಣು ಹಂಪಲು ವಿತರಣೆ

06raju7
Published on

ಚಾಮರಾಜನಗರ: ಸಂಸದ ವಿ.ಶ್ರೀನಿವಾಸ್‌ಪ್ರಸಾದ್ 77 ನೇ ಹುಟ್ಟುಹಬ್ಬದ ಅಂಗವಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ಒಳ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಮಾಡಲಾಯಿತು.

ನಗರದ ಶ್ರೀ ಚಾಮರಾಜೇಶ್ವರ ದೇವಸ್ಥಾನದಲ್ಲಿ ಡಾ.ಎನ್.ಎಸ್.ಮೋಹನ್ ಸ್ನೇಹ ಬಳಗದ ಅಧ್ಯಕ್ಷ ಕುರುಬರಹುಂಡಿ ಕೆ.ಆರ್.ಲೋಕೇಶ್, ಡಾ.ಎನ್.ಎಸ್.ಮೋಹನ್ ನೇತೃತ್ವದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಇದೇ ವೇಳೆ ತಾಲೂಕು ಅಸ್ಪತ್ರೆಯಲ್ಲಿ ಒಳ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಮಾಡಲಾಯಿತು. ಈ ವೇಳೆ ಡಾ.ಎನ್.ಎಸ್.ಮೋಹನ್ ಮಾತನಾಡಿ, ದೇಶ ಕಂಡ ರಾಜಕಾರಣಿಗಳಲ್ಲಿ ಶ್ರೀನಿವಾಸಪ್ರಸಾದ್ ಕೂಡ ಒಬ್ಬರು, ತಮ್ಮ ಸುಧೀರ್ಘ ರಾಜಕಾರಣದಲ್ಲಿ ಉತ್ತಮ ಹೆಸರು ಸಂಪಾದನೆ ಮಾಡುವ ಜತೆಗೆ ಪ್ರಾಮಾಣಿಕತೆ ಹಾಗೂ ಕಳಂಕರಹಿತವಾದ ಆಡಳಿತ ನೀಡಿದ್ದಾರೆ. ಈ ವಯಸ್ಸಿನಲ್ಲಿಯೂ ಸಕ್ರೀಯ ರಾಜಕಾರಣದಲ್ಲಿದ್ದು, ನಮ್ಮೆಲ್ಲರಿಗೂ ಸ್ಪೂರ್ತಿಯಾಗಿದ್ದಾರೆ. ಅವರ ಜೀವನ ಶೈಲಿ ಹಾಗೂ ಸಿದ್ದಾಂತಗಳು ನಮ್ಮಂಥ ಯುವ ನಾಯಕರಿಗೆ ಸ್ಪೂರ್ತಿಯಾಗಿದೆ ಎಂದರು.

ಸ್ನೇಹ ಬಳಗದ ಅಧ್ಯಕ್ಷ ಲೋಕೇಶ್, ಮುಖಂಡ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಎಚ್.ಎಂ.ಬಸವಣ್ಣ, ಕಾಡಹಳ್ಳಿ ಕುಮಾರ್, ನಗರಸಭಾ ಮಾಜಿ ಸದಸ್ಯ ಬಸವರಾಜು, ಪಣ್ಯದಹುಂಡಿ ರಾಜು, ಕೇಶವಮೂರ್ತಿ, ಮಹೇಶ್, ಅವಿನಾಶ್, ಶ್ರೇಯಸ್ಸು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net