

ಚಾಮರಾಜನಗರ: ಶಿಕ್ಷಣದಿಂದ ಎಲ್ಲವನ್ನು ಪಡೆಯಬಹುದಾಗಿದ್ದು, ಶಿಕ್ಷಣ ಪತ್ರಿಯೊಬ್ಬರ ಹಕ್ಕಾಗಿದೆ ಎಂದು ದ್ರಾವಿಡ ಅರ್ಮಿ ರಾಜ್ಯಾಧ್ಯಕ್ಷ ಸಂಪತ್ ಸುಬ್ಬಯ್ಯ ತಿಳಿಸಿದರು.
ನಗರದ ಗಾಳಿಪುರ ಬಡಾವಣೆಯ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೆಂಗಳೂರಿನ ಆಶಾ ಕಿರಣ್ ಫೌಂಡೆಷನ್ ಹಾಗೂ ಚಿತ್ರನಟ ಡಾಲಿ ಧನಂಜಯ್ ಅಭಿಮಾನಿಗಳ ಬಳಗದ ವತಿಯಿಂದ ಶನಿವಾರ ಆಯೋಜಿಸಿದ್ದ ಉಚಿತ ನೋಟ್ ಪುಸ್ತಕ, ಬ್ಯಾಗ್ ಮತ್ತು ಶಾಲೆಗೆ ವಾಟರ್ ಪೀಲ್ಟರ್ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಡಾ.ಬಿ.ಆರ್. ಅಂಬೇಡ್ಕರ್ ಸಂವಿಧಾನದಲ್ಲಿ ಯಾವುದೇ ಮಕ್ಕಳು ಶಿಕ್ಷಣ ದಿಂದ ವಂಚಿತರಾಗಬಾರದು ಎಂದು ಹೇಳಿದ್ದಾರೆ. ನಮ್ಮ ಸಂಸ್ಥೆಯ ವತಿಯಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚು ಒತ್ತು ನೀಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ, ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಬೇಕಾಗುವ ಸಾಮಗ್ರಿಗಳನ್ನು ನೀಡುತ್ತಿದ್ದೇವೆ. ಪ್ರತಿಮನೆಯಲ್ಲಿ ಹೆಣ್ಣು ಮಕ್ಕಳು ವಿದ್ಯಾಭ್ಯಾಸವನ್ನು ಕಲಿತರೆ ಮನೇಯೇ ಶಾಲೆಯಾಗಿ ಪರಿವರ್ತನೆಯಾಗುತ್ತದೆ ಎಂದರು.
ಆಶಾಕಿರಣ ಪೌಂಡೇಷನ್ ವ್ಯವಸ್ಥಾಪಕಿ ಆಶಾ ಮಾತನಾಡಿ, ಸರ್ಕಾರಿ ಶಾಲೆಯನ್ನು ಆರ್ಧದಲ್ಲಿ ಬಿಟ್ಟು ವಿದ್ಯೆಯಿಂದ ವಂಚಿತರಾಗುತ್ತಿರುವ ಮಕ್ಕಳನ್ನು ಗುರುತಿಸಿ ಶಾಲೆಗೆ ಕರೆತರುವ ಪ್ರಯತ್ನವನ್ನು ಮಾಡಲಾಗುತ್ತಿದೆ. ಗಾಳಿಪುರದ ಸರ್ಕಾರಿ ಉರ್ದು ಶಾಲೆಯ 16 ಮಕ್ಕಳನ್ನು ದತ್ತು ಪಡೆದು ಅವರ ವಿದ್ಯಾಭ್ಯಾಸಕ್ಕೆ ಉತ್ತೇಜನ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಪೋಷಕರು ಮಕ್ಕಳಿಗೆ ಶಿಕ್ಷಣ ನೀಡಿದರೆ ಮಕ್ಕಳು ಆಧಾರವಾಗಲಿದ್ದಾರೆ. ಸರ್ಕಾರಿ ಶಾಲೆಗಳು ಇತ್ತೀಚೆಗೆ ಮುಚ್ಚುವಂತಹ ಸ್ಥಿತಿಗೆ ತಲುಪಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಚಿತ್ರನಟ ಡಾಲಿ ಧನಂಜಯ್ ಅಭಿಮಾನಿ ಬಳಗದ ಶಿವಕುಮಾರ್, ಶಿಕ್ಷಕ ಕೆ.ಎಸ್.ಮಾದಪ್ಪ ಮಹೇಂದ್ರ, ಸ್ವಾಮಿ, ಸುಧೀರ್, ಶಿವಕುಮಾರ್, ರಂಗಸ್ವಾಮಿ, ನವಾಬ್, ಗಂಗಾಧರ್, ಸಯ್ಯದ್, ತಾಸಿನಾಬೇಗಂ, ಹತಿಯಬೇಗಂ, ಸಿ.ಕೆ. ವಾಸು, ಸುವರ್ಣಮ್ಮ, ಯಾಸ್ಮಿನ್ ಖಾನಂ ಉಪಸ್ಥಿತರಿದ್ದರು.