

ಚಾಮರಾಜನಗರ: ರಾಜಧಾನಿ ಬೆಂಗಳೂರಿನಲ್ಲಿ ಕನ್ನಡದ ಅಸ್ಮಿತೆ ಕ್ಷೀಣಿಸುತ್ತಿದೆ ಎಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಅಧ್ಯಕ್ಷ ರಮೇಶ್ ಗೌಡ್ರು ವಿಷಾಧ ವ್ಯಕ್ತಪಡಿಸಿದರು.
ನಗರದ ಪ್ರವಾಸಿಮಂದಿರದಲ್ಲಿ ಆಯೋಜಿಸಿದ್ದ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಜಿಲ್ಲಾ ಘಟಕದ ಪದಾಧಿಕಾರಿಗಳ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಕನ್ನಡದ ಅಸ್ಮಿತೆ, ಕನ್ನಡಿಗರ ಭಾಷಾಭಿಮಾನ ಮತ್ತು ಭಾಷೆಯನ್ನು ಉಳಿಸಿ-ಬೆಳೆಸುವ ಆಲೋಚನಾ ಕ್ರಮ ಅದನ್ನು ಜಾರಿಗೊಳಿಸುವ ಯೋಜನೆಗಳನ್ನು ಅವಲಂಬಿಸಿದೆ. ಕನ್ನಡನಾಡು, ನುಡಿಗಾಗಿ ನಿರಂತರ ಹೋರಾಟ ಮಾಡಲಾಗುತ್ತದೆ. ಕನ್ನಡ ಅತ್ಯಂತ ಪುರಾತನ ಭಾಷೆಯಾಗಿದ್ದು, ನಮ್ಮ ಭಾಷೆಗೆ ಎರಡೂವರೆ ಸಾವಿರ ವರ್ಷಗಳ ಇತಿಹಾಸವಿದೆ. ರಾಜಕೀಯ ಪಕ್ಷಗಳು ಕನ್ನಡ ಭಾಷೆಯ ಉಳಿವಿಗೆ ಗಮನ ಹರಿಸುತ್ತಿಲ್ಲ. ಅನ್ಯ ಭಾಷಿಗರ ಹಾವಳಿಯಿಂದ ಕನ್ನಡಕ್ಕೆ ಧಕ್ಕೆಯಾಗುತ್ತಿದ್ದು, ಅದನ್ನು ಖಂಡಿಸಿ ಹೋರಾಟ ಮಾಡುವಲ್ಲಿ ನಮ್ಮ ವೇದಿಕೆ ಶ್ರಮಿಸುತ್ತಿದೆ ಎಂದರು.
ಸಭೆಯಲ್ಲಿ ವೇದಿಕೆ ಉಪಾಧ್ಯಕ್ಷ ಬೆಂಕಿ ಶ್ರೀಧರ್, ರಂಜಿತ್ ಗೌಡ, ನಿರ್ದೇಶಕ ವೀರಪ್ಪ, ಮಹದೇವಯ್ಯ, ಚಿಕ್ಕಯ್ಯ, ಗೌರವಾಧ್ಯಕ್ಷ ಪಿ.ಲಿಂಗರಾಜು, ಅಧ್ಯಕ್ಷ ಮಲ್ಲು ಯರಗಂಬಳ್ಳಿ, ಪ್ರಧಾನ ಕಾರ್ಯದರ್ಶಿ ಆರ್.ಮಹದೇವಶೆಟ್ಟಿ, ನಾರಾಯಣ, ಶಿವಮೂರ್ತಿ, ಕೆ.ಕೆ.ನಾಗರಾಜು, ರಾಜು ಆಟೋ ರಾಜು, ಮೂರ್ತಿ, ಶಿವಸ್ವಾಮಿ, ತಾಲೂಕು ಅಧ್ಯಕ್ಷ ಎಂ.ನಿಂಗಶೆಟ್ಟಿ, ಉಪಾಧ್ಯಕ್ಷ ಮಂಜು, ಕಾರ್ಯದರ್ಶಿ ಎಸ್.ಲಿಂಗರಾಜು, ಯಳಂದೂರು ತಾಲೂಕು ಅಧ್ಯಕ್ಷ ನಾಗರಾಜು, ಮಹಿಳಾ ಘಟಕದ ಅಧ್ಯಕ್ಷೆ ರಾಣಿ,ಪ್ರಧಾನ ಕಾರ್ಯದರ್ಶಿ ಪ್ರೇಮಲತಾ, ತಾಲೂಕು ಅಧ್ಯಕ್ಷೆ ನಳಿನ್ ಕುಮಾರಿ , ಉಪಾಧ್ಯಕ್ಷ ವಸಂತ, ನಾಗಮ್ಮ, ರಾಜಮ್ಮ, ಶುಭರಾಣಿ, ವಾಣಿಶ್ರೀ ಉಪಸ್ಥಿತರಿದ್ದರು.